ಕರಾವಳಿ

ಕರ್ನಾಟಕ ನಂಬರ್ ಒನ್ ರಾಜ್ಯವಾಗಬೇಕಾದರೆ ಮಹತ್ತರ ಪ್ರಗತಿ ಸಾಧಿಸಿರುವ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು : ಪ್ರಧಾನಿ ಮೋದಿ

Pinterest LinkedIn Tumblr

ಮಂಗಳೂರು / ಊದುಪಿ, ಮೇ. 03: ಕರ್ನಾಟಕದ ಡಬಲ್ ಎಂಜಿನ್ ಸರಕಾರದಲ್ಲಿ ಕೈಗಾರಿಕೆ, ಕೃಷಿ,ಮೀನುಗಾರಿಕೆ, ಸೇವಾ ಕ್ಷೇತ್ರ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆ ಅರ್ಥಿಕ ಹಬ್ ಆಗಿದೆ. ಡಬಲ್ ಎಂಜಿನ್ ಸರಕಾರದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಸಾಧಿಸಿದೆ. ಈ ಬಾರಿ ಕೂಡ ಕರ್ನಾಟಕದಲ್ಲಿ ಸ್ಥಿರ ಮತ್ತು ಬಿಲಿಷ್ಖ ಸರಕಾರಕ್ಕ ಮಹಾಜನತೆ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಆರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆನೀಡಿದರು.

ಮಂಗಳೂರಿನ ಹೊರವಲಯದ ಮೂಲ್ಕಿ ಸಮೀಪದ ಕೊಲ್ನಾಡಿನಲ್ಲಿ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರ ನವ ಕರ್ನಾಟಕ ಜನಸಂಕಲ್ಪ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ದೇಶದಲ್ಲಿ ನಂಬರ್ ಒನ್ ರಾಜ್ಯವಾಗಬೇಕೋ, ಬೇಡವೊ ಎಂದು ಜನರನ್ನು ಪ್ರಶ್ನಿಸಿದಾಗ ಆಗಬೇಕು ಎಂದು ಜನರು ಕೂಗಿದರು. ನಂಬರ್ ಒನ್ ರಾಜ್ಯವಾಗಬೇಕಾದರೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು .ನಾನು ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ.ಜನರ ಪ್ರೀತಿ,ವಿಶ್ವಾಸ, ಮಹಿಳೆಯರ ಅಶೀರ್ವಾದ ,ಯುವಜನತೆಯ ಉತ್ಸಾಹ ಅಭೂತಪೂರ್ವವಾಗಿದೆ. ಹೋದ ಕಡೆಗಳೆಲ್ಲಾ ಒಂದೇ ಮಂತ್ರ ಕೇಳುತ್ತಿದೆ. ಅದು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಎಂಬುದಾಗಿದೆ ಎಂದರು.

ಕರ್ನಾಟಕದಲ್ಲಿ ಸ್ಥಿರ ಸರಕಾರವನ್ನು ಸ್ಥಾಪಿಸಿ ಅಭಿವೃದ್ಧಿಯಲ್ಲಿ ದೇಶದಲ್ಲಿ ನಂಬರ್ ಒನ್ ರಾಜ್ಯವನ್ನಾಗಿಸುವುದು ಬಿಜೆಪಿ ಸಂಕಲ್ಪವಾಗಿದ್ದುಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಈ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದರು.

ಕರ್ನಾಟಕದಲ್ಲಿ ಭಯೋತ್ಪಾದನೆಯ ನಿಗ್ರಹಕ್ಕೆ ಬಿಜೆಪಿ ಕ್ರಮಕೈಗೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ. ದೇಶದಲ್ಲಿ ಆತಂಕವಾದ ನಿಗ್ರಹಕ್ಕೆ ಬಿಜೆಪಿ ಸರಕಾರವು ಹೆಣಗಾಡುತ್ತಿದೆ. ಆದರೆ ಕಾಂಗ್ರೆಸ್ ಆತಂಕವಾದಲ್ಲಿ ತೊಡಗಿದವರಿಗೆ ಬೆಂಬಲ ನೀಡುತ್ತಿದೆ. ಅವರನ್ನು ಬಿಡುಗಡೆ ಮಾಡುತ್ತಿದೆ ಎಂದು ಮೋದಿಯವರು ಆತಂಕ ವ್ಯಕ್ತಪಡಿಸಿದರು.

ಯುವಜನರಿಗೆ ಉಜ್ವಲ ಭವಿಷ್ಯ ನಿರ್ಮಾಣ ಬಿಜೆಪಿಯ ಗುರಿಯಾಗಿದೆ. ದೇಶದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಭಾರಿ ಉತ್ತೇಜನ ನೀಡಲಾಗುತ್ತಿದೆ. ಅಟಲ್‌ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.

ಪ್ರತಿ ಮನೆಗೆ ಹೋಗಿ,ನನಗೆ ಅಶೀರ್ವಾದ ಬೇಡಿನಾನು ಇಲ್ಲಿರುವ ಪ್ರತಿಯೊಂದು ಕಾರ್ಯಕರ್ತರಲ್ಲಿ ಒಂದು ಮನವಿ ಮಾಡುತ್ತಿದ್ದೇನೆ. ನೀವು ಇದನ್ನು ಪ್ರತಿಯೊಂದು ಮನೆಗೆ ಮುಟ್ಟಿಸಬೇಕು. ಮುಟ್ಟಿಸುತ್ತೀರೋ  ಇಲ್ಲವೊಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದರು. ಮುಟ್ಟಿಸುವುದಾದರೆ ಮೊಬೈಲ್‌ನ ಫ್ಲಾಶ್ ಲೈಟ್ ಆನ್ ಮಾಡಿ ಮೇಲಕ್ಕೆ ಎತ್ತಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷಾಂತರ ಕಾರ್ಯಕರ್ತರು ಮೊಬೈಲ್‌ನ ಫ್ಲಾಶ್ ಲೈಟ್ ಆನ್ ಮಾಡಿ ಮೇಲಕ್ಕೆ ಎತ್ತಿದರು.

ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತಕ್ಕೆ ವಿದೇಶಗಳಲ್ಲಿ ಗೌರವ ಹೆಚ್ಚಾಗಿದೆ. ಆಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಲ್ಲಿ ಭಾರತ ಪರ ಜೈಕಾರ ಕೇಳಿ ಬರುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ನುಡಿದರು.

ಪರಶುರಾಮ ಕ್ಷೇತ್ರದ ಎನ್ನ ಮೋಕದ ತುಳುವೆಪ್ಪನ ಜೋಕುಲೆ ಎಂದು ತುಳುವಿನಲ್ಲಿ ಮಾತು ಆರಂಭಿಸಿದನರೇಂದ್ರ ಮೋದಿಯವರು ಮಾತಿನುದ್ದಕ್ಕೆ ಸಹೋದರ ಸಹೋದರಿಯರೇ, ಸ್ನೇಹಿತರೆ ಎಂದು ಸಂಬೋದಿಸುತ್ತಾ ಮಾತು ಮುಂದುವರಿಸಿದರು. ಬಜರಂಗ ಬಲಿಕೀ ಜೈ;ಭಾರತಾ ಮಾತಾಕೀ ಜೈ ಎಂದು ಭಾಷಣಕ್ಕೆ ಮುಕ್ತಾಯ ಹಾಡಿದರು.

ಉಭಯ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳಾದ ಭಾಗೀರಥಿ ಮುರುಳ್ಯ , ಆಶಾ ತಿಮ್ಮಪ್ಪ ಗೌಡ. ರಾಜೇಶ್ ನಾಯಕ್, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್,ಯಶಪಾಲ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿಗುರುರಾಜ್, ಸುನೀಲ್ ಕುಮಾರ್,ಸತೀಶ್ ಕುಮಾರ್ ಕುಂಪಲ, ಡಾ ಭರತ್ ಶೆಟ್ಟಿ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಉಭಯ ಜಿಲ್ಲೆಗಳ ಬಿಜೆಪಿ ನಾಯಕರು, ಮಾಜಿ ಶಾಸಕರು ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಸ್ವಾಗತಿಸಿದರು.ರಾಜ್ಯ ಬಿಜೆಪಿ ವಕ್ತಾರ,ಕ್ಯಾ ಗಣೇಶ್ ಕಾರ್ನಿಕ್ ನಿರೂಪಿಸಿದರು. .ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ವಂದಿಸಿದರು.

Comments are closed.