ಕರಾವಳಿ

ಉಪ್ಪಿನಂಗಡಿಯಲ್ಲಿ ಆತಂಕ ಸೃಷ್ಟಿಸಿದ ಐದು ಗ್ರೆನೇಡ್ ನಿಷ್ಕ್ರೀಯ

Pinterest LinkedIn Tumblr

ಉಪ್ಪಿನಂಗಡಿ: ಇಳಂತಿಲದ ನಿವೃತ್ತ ಸೇನಾ ಸಿಬ್ಬಂದಿ ಜಯ ಕುಮಾರ್ ಪೂಜಾರಿ ಅವರ ಮನೆಯ ದಾರಿಯಲ್ಲಿ ಶನಿವಾರ ಪತ್ತೆಯಾದ ಐದು ಗ್ರೆನೇಡ್ಗಳನ್ನು ಮಂಗಳವಾರ ನೆಲ್ಯಾಡಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ನಿಷ್ಕ್ರೀಯ ದಳದ ಸಹಕಾರದಲ್ಲಿ ನಿಷ್ಕ್ರೀಯಗೊಳಿಸಲಾಯಿತು.

ಪುತ್ತೂರು ಡಿವೈಎಸ್ಪಿ ಗಾನ ಪಿ. ಕುಮಾರ್ , ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ , ಗುಪ್ತದಳ ವಿಭಾಗದ ಇನ್ ಸ್ಪೆಪೆಕ್ಟರ್ ನಂದ ಕುಮಾರ್ , ಬಾಂಬ್ ನಿಷ್ಕ್ರೀಯ ದಳದ ಸಂತೋಷ್ ಮೊದಲಾದವರು ಈ ವೇಳೆ ಇದ್ದರು.

ಗ್ರೆನೇಡ್ ಗಳು 40 ವರ್ಷ ಹಳೆಯದಾಗಿದ್ದು, ಪಿನ್ ಎಸೆದು ಸ್ಪೋಟಿಸಬಹುದಾದ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎನ್ನಲಾಗಿದೆ.

ಗ್ರೆನೇಡ್ ಗಳ ಭಾಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಇತ್ತ ಭೂ ಸೇನೆಯಲ್ಲಿ ಮಾತ್ರ ಬಳಕೆಯಲ್ಲಿದ್ದ ಗ್ರೆನೇಡ್ ಗಳು ನಿವೃತ್ತ ಯೋಧನ ಮನೆಗೆ ಹೋಗುವ ದಾರಿಯಲ್ಲಿ ಪತ್ತೆಯಾಗಿರುವ ಬಗ್ಗೆ ನಾನಾ ಉಹಾಪೋಹಗಳು , ಸಂದೇಹಗಳು ಮೂಡಿವೆ.

Comments are closed.