ಮಂಗಳೂರು: ಸ್ನೇಹಿತನ ಸಹೋದರಿಯಾದ 16 ವರ್ಷದ ಬಾಲಕಿ ಮೇಲೆ ರೌಡಿಶೀಟರ್ ಅತ್ಯಾಚಾರ ನಡೆಸಿರುವ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೈಕಂಬದ ಹೊಟೇಲೊಂದರಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ ರೌಡಿಶೀಟರ್ ನವೀನ್ ಸಿಕ್ವೇರ ಬಂಧಿತ ಆರೋಪಿ.

ಬಾಲಕಿ ಸಹೋದರನ ಪರಿಚಯದ ಹಿನ್ನೆಲೆ ಬಾಲಕಿ ನಂಬರ್ ಪಡೆದಿದ್ದ ರೌಡಿಶೀಟರ್ ಆಕೆ ಮನೆಯಲ್ಲಿ ಒಬ್ಬಳೇ ಇರುವ ವೇಳೆ ಮನೆಗೆ ಬಂದು ಬಾಲಕಿಗೆ ಜ್ಯೂಸ್ ನಲ್ಲಿ ಅಮಲು ಬರುವ ಮದ್ದು ಬೆರೆಸಿ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.
ಅತ್ಯಾಚಾರ ನಡೆಸಿದ ಬಳಿಕ ಆರೋಪಿಯು ಉಡುಪಿ ಬಾರ್ ಒಂದಕ್ಕೆ ತೆರಳಿ ಕೆಲಸ ಕೇಳಿದ್ದು, ಉಡುಪಿ ಬಾರ್ ನಿಂದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೇಲೆ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್, ಗುಂಪು ಘರ್ಷಣೆ, ಸರಗಳ್ಳತನ ಸೇರಿ ಹಲವು ಪ್ರಕರಣಗಳು ದಾಖಲಾಗಿದೆ.
ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
Comments are closed.