ಕುಂದಾಪುರ: ಲಾಭದ ನಿರೀಕ್ಷೆಯಿಂದಲೇ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯ ದಲಿತರನ್ನು ಕೆಣಕಿದರೆ ರಾಜ್ಯಾದ್ಯಂತ ಇನ್ನಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಬುಧವಾರ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ನಡೆದ, ದಲಿತ ವಿರೋಧಿ ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು.
ತಾ.ಪಂ. ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ ಮಾತನಾಡಿ, ಬಿಜೆಪಿಯಿಂದ ದಲಿತರಿಗೆ ಸಮಾನತೆ, ಸ್ವಾಭಿಮಾನ ದೊರೆತಿದೆ. ಸಿದ್ದರಾಮಯ್ಯನಂತಹವರ ಮಾತುಗಳಿಂದ ಇನ್ನಷ್ಟು ಮಂದಿ ಬೇರೆ ಬೇರೆ ಪಕ್ಷದಿಂದ ಬಿಜೆಪಿಗೆ ಬರುವ ಸಾಧ್ಯತೆಯಿದೆ ಎಂದರು.
ಬಿಜೆಪಿ ಕುಂದಾಪುರ ಕ್ಷೇತ್ರ ಅಧ್ಯಕ್ಷ ಶಂಕರ ಅಂಕದಕಟ್ಟೆ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ ಮಾತನಾಡಿದರು.
ತಾ.ಪಂ. ಮಾಜಿ ಸದಸ್ಯರಾದ ರೂಪಾ ಪೈ, ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಪುರಸಭೆ ಸದಸ್ಯರಾದ ಪ್ರಭಾಕರ ವಿ., ಸಂತೋಷ್ ಕುಮಾರ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕುಂದಾಪುರ ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಹೇಶ್ ಕಾಳಾವರ, ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ.ಜಿ., ಮುಖಂಡರಾದ ಸುನಿಲ್ ಶೆಟ್ಟಿ, ಅರುಣ್ ಬಾಣ, ಸುರೇಂದ್ರ ಕಾಂಚನ್, ಅಭಿಷೇಕ್ ಅಂಕದಕಟ್ಟೆ, ಸದಾನಂದ ಕೈಪುಂಜಾಲು, ಮಹೇಶ್ ಶೆಣೈ ಕುಂಭಾಶಿ, ಪ್ರದೀಪ್ ಮಾರ್ಗೋಳಿ, ಬೈಂದೂರು ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಸುಂದರ ಬಾಬು ಮೊದಲಾದವರು ಇದ್ದರು.
Comments are closed.