ಉಡುಪಿ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಫಿಶರೀಸ್ ಕಾಲೋನಿಯಲ್ಲಿ ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ್ದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಂದೂರು ಆಹಾರ ನಿರೀಕ್ಷಕ ವಿನಯ್ ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಬೈಂದೂರಿನ ನಾವುಂದ ನಿವಾಸಿ ಜುಬೇರ್ (35), ಬೈಂದೂರು ಬಡಾಕೆರೆಯ ಮುಂತಾಸೀಬ್ (42 ) ಬಂಧಿತ ಆರೋಪಿಗಳು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಫಿಶರೀಸ್ ಕಾಲೋನಿಗೆ ತೆರಳಿದಾಗ ಇಕೋ ಕಾರು ನಂಬರ್ ಕೆಎ-20 ಎಮ್ ಡಿ-7035 ನೇದರಲ್ಲಿ ಅಕ್ಕಿ ಚೀಲವನ್ನು ಲೋಡ್ ಮಾಡಿ ಇಟ್ಟಿರುವುದು ಕಂಡು ಬಂದಿದೆ.
ತಕ್ಷಣ ಬೈಂದೂರು ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲಿಸ್ ಸಿಬ್ಬಂದಿಯೊಂದಿಗೆ ಕಾರಿನಲ್ಲಿ 31 ಚೀಲಗಳಲ್ಲಿ ಇದ್ದ ಒಟ್ಟು 1000 ಕೆ.ಜಿ ಅಕ್ಕಿ ಮತ್ತು ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.