ಹೈದರಾಬಾದ್: ಪ್ರತಿಷ್ಠಿತ ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ) ಪ್ರಧಾನ ಸಮಾರಂಭ ನಡೆದಿದ್ದು, ದಿಯಾ ಚಿತ್ರದ ನಟನೆಗಾಗಿ ಕೋಸ್ಟಲ್‌ವುಡ್ ಹಾಗೂ ಸ್ಯಾಂಡಲ್‌ವುಡ್ ನಟ ಪೃಥ್ವಿ ಅಂಬರ್ ಅವರು ಅತ್ಯುತ್ತಮ ನಟ (ಚೊಚ್ಚಲ ಸಿನಿಮಾ) ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದಿಯಾ 2020ರಲ್ಲಿ ಬಿಡುಗಡೆಯಾದ ಸಿನಿಮಾ ಆಗಿದ್ದು, ಕೆ.ಎಸ್ ಅಶೊಖ್ ನಿರ್ದೇಶಿಸಿದ್ದಾರೆ. ಶ್ರೀ ಕೃಷ್ಣ ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಿ. ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ.
ದಿಯಾ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಹಾಗೂ ಖುಷಿ ರವಿ ಜೊತೆ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದಾರೆ. ದಿಯಾ ಹಿಂದಿ ರಿಮೇಕ್‌ನಲ್ಲೂ ಕೂಡಾ ಪೃಥ್ವಿ ಅವರು ನಟಿಸಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ ರೀಮೇಕ್ ಮಾಡಲಾಗಿದೆ.
ಪೃಥ್ವಿ ಅಂಬರ್ ಅವರು, ಪಿಲಿಬೈಲ್ ಯಮುನಕ್ಕಾ, ಎನ್ನಾ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಹರೀಶ್ ಶೇರಿಗಾರ್ ಅವರ ಆಕ್ಮೇ ಇಂಟರ್ನ್ಯಾಷನಲ್ ನಿರ್ಮಾಣದ ‘ಇಂಗ್ಲಿಷ್’ ತುಳು ಸಿನಿಮಾದಲ್ಲಿ ನಟಿಸಿದ್ದಾರೆ.
Comments are closed.