ಕರಾವಳಿ

ಬಿಡಾಡಿ ದನಗಳ ಕಳವು: ಬೈಂದೂರು ಪೊಲೀಸರಿಂದ ಪಿಕಪ್ ಚಾಲಕ ಬಂಧನ, 6 ಜಾನುವಾರು ರಕ್ಷಣೆ

Pinterest LinkedIn Tumblr

ಕುಂದಾಪುರ: ರಸ್ತೆ ಬದಿ ಮಲಗುವ ಬಿಡಾಡಿ ಜಾನುವಾರುಗಳನ್ನು ಕದ್ದು ಅವುಗಳ ವಧೆಗಾಗಿ ಸಾಗಿಸುತ್ತಿದ್ದ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರು ಜಾನುವಾರುಗಳನ್ನು ರಕ್ಷಿಸಿ ಪಿಕಪ್ ವಾಹನದ ಚಾಲಕನನ್ನು ಬಂಧಿಸಿದೆ. ಜಾನುವಾರು ಸಾಗಾಟದ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬೈಂದೂರು ಸಮೀಪದ ಯಡ್ತರೆ ಜಂಕ್ಷನ್ ಬಳಿ ಮಣ್ಣುರಸ್ತೆಯಲ್ಲಿ ಮಲಗಿದ್ದ ದನಗಳನ್ನು ಕೆಎ 47 5929 ನೇ ಬೊಲೆರೋ ಪಿಕ್ ಅಪ್ ವಾಹನದಲ್ಲಿದ್ದವರು ತುಂಬಿಸಿಕೊಂಡಿದ್ದು ಪಿಕ್ ಅಪ್ ವಾಹನದಲ್ಲಿದ್ದವರು ಶಿರೂರು ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು. ಇದನ್ನು ಕಂಡ‌ ದಿನೇಶ್ ಹಾಗೂ ಸ್ನೇಹಿತ ಶಿರೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಲ್ಲದೆ ಶಿರೂರು ಟೋಲ್ ತನಕ ಬೆನ್ನತ್ತಿದ್ದರೂ ಕೂಡ ವಾಹನ ಪತ್ತೆಯಾಗಿರಲಿಲ್ಲ.

ಬೈಂದೂರು ಪೊಲೀಸರ ಕ್ಷಿಪ್ರ ಕಾರ್ಯಚರಣೆ: ಓರ್ವ ಬಂಧನ
ಬುಧವಾರ ಬೆಳಿಗ್ಗೆ 7:30ಕ್ಕೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದ ವಾಹನ ಸಂಖ್ಯೆ ಕೆ ಏ 47 5929 ಮಹೇಂದ್ರ ಪಿಕ್ ಅಪ್ ವಾಹನದ ಬಗ್ಗೆ ಬೈಂದೂರು ವೃತ್ತ ನೀರಿಕ್ಷಕ ಸಂತೋಷ ಕಾಯ್ಕಿಣಿಯವರಿಗೆ ಮಾಹಿತಿ ಸಿಕ್ಕಿ ಕೂಡಲೇ ವಾಹನವನ್ನು ಬೆನ್ನುಟ್ಟುವಂತೆ ಠಾಣಾಧಿಕಾರಿಯವರಿಗೆ ತಿಳಿಸುತ್ತಾರೆ. ಅದರಂತೆಯೇ
ಕೂಡಲೇ ಕಾರ್ಯಪ್ರವ್ರತ್ತರಾದ ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಹೆಡ್ ಕಾನ್ಸ್‌ಟೆಬಲ್ ಶ್ರೀನಿವಾಸ್ ನಾಯಕ್, ಸುಜಿತ್, ಅಶೋಕ್ ರಾತೋಡ್ ಮೊದಲಾದವರು ವಾಹನವನ್ನು ಭಟ್ಕಳದ ತನಕ ಬೆನ್ನಟ್ಟಿ ವಾಹನದಲ್ಲಿದ್ದ 6 ಜಾನುವಾರುಗಳನ್ನು ಜೀವಂತವಾಗಿ ಹಿಡಿದು, ವಾಹನದ ಚಾಲಕ ಖತರ್ನಾಕ್ ಖದೀಮ ಶಬ್ಬೀರ್ (35) ಎಂಬಾತನನ್ನು ಬಂಧಿಸಿದ್ದು ವಾಹನ ವಶಕ್ಕೆ ಪಡೆದರು. ಒಂದಿಬ್ಬರು ಆರೋಪಿಗಳು ಪರಾರಿಯಾದ ಮಾಹಿತಿಯಿದ್ದು ಪೊಲೀಸರು ಅವರಿಗೆ ಬಲೆ ಬೀಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.