ಕರಾವಳಿ

ವ್ಯಾಕ್ಸಿನ್ ವಿಚಾರದಲ್ಲಿ ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Pinterest LinkedIn Tumblr

ಉಡುಪಿ: ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸದಾಗಿ ಬಂದವರಿಗೆ ನಾನು ಸ್ವಾಗತ ಮಾಡುತ್ತೇನೆ
ಹೊಸ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಮಗೆ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದುಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನು ಅವರು ಕರೆದಿದ್ದಾರೆ
ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡಿದ್ದಾರೆ.ಉಳಿದಂತೆ ಪೊಲಿಟಿಕಲ್ ಬಾಸ್ ಗಳು ಹೇಳಿದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಯಾರ ಸುದ್ದಿಯೂ ಬೇಡ…..!
ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ ಸುಮಲತಾ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಟಾಲಿನ್ ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ
ಅದಕ್ಕೊಂದು ತಂಡ ಇದೆ. ತಂಡದ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಎಂದು ಉಡುಪಿಯಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ಉಡುಪಿಯಲ್ಲಿ ಮೀನುಗಾರ ಮುಖಂಡರ ಜೊತೆ ಡಿಕೆಶಿ ಸಭೆ ನಡೆಸಿ ಎರಡು ಗಂಟೆಗಳ ಸಭೆ ನಡೆಸಿ ಸಮಸ್ಯೆ ಆಲಿಸಿದರು. ಮೀನುಗಾರರ ಸಮಸ್ಯೆ ಹೇಳಲು ಮುಖ್ಯಮಂತ್ರಿಗಳ ಭೇಟಿಯಾದರೆ ಲೆಕ್ಕಕ್ಕೆ ಬರಲ್ಲ
ವಿಧಾನಸಭೆಯಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ. ಮೀನುಗಾರರ ಧ್ವನಿಯಾಗಿ ಸದನದಲ್ಲಿನ ಬೆಲೆ ಕೊಡಿಸುತ್ತೇನೆ. ಈ ಸರಕಾರ ಮೀನುಗಾರರ ಸಮಸ್ಯೆ ನಿವಾರಿಸುತ್ತದೆ ಎಂಬ ನಂಬಿಕೆ ಇಲ್ಲ. ಮುಂದಿನ ಅವಧಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮೀನುಗಾರಿಕೆ ವಿಚಾರದಲ್ಲಿ ರಾಷ್ಟ್ರದಲ್ಲಿ ಏಕರೂಪಿ ಕಾನೂನು ಬರಬೇಕು. ಎಲ್ಲಾ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ
ಮೀನುಗಾರರ ಪೆನ್ಶನ್, ಡೀಸೆಲ್ ಸಬ್ಸಿಡಿ, ಆಶ್ರಯ ಮನೆ, ಸಿಆರ್ ಝಡ್ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಿವಕುಮಾರ್ ಭರವಸೆ ನೀಡಿದರು.

ಡಿಸಿಎಂ ಸವದಿ ಪುತ್ರ ಚಿದಾನಂದ ಸವದಿ ಕಾರು ಅಪಘಾತ ವಿಚಾರದಲ್ಲಿ ಮಾತನಾಡಿದ ಡಿಕೆಶಿ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ
ಈ ಹಿಂದೆ ರವಿ ವಿಚಾರದಲ್ಲೂ ಹೀಗೆ ಆಗಿತ್ತು
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.

ಕಾಂಗ್ರೆಸ್ ವಲಸೆ ಶಾಸಕರ ಮರು ಸೇರ್ಪಡೆ ವಿಚಾರ
ಈ ಬಗ್ಗೆ ನಾನು ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ, ಆಮೇಲೆ ಈ ವಿಚಾರ ಮಾತನಾಡೋಣ. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದರು. ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ರೇಸ್ ವಿಚಾರದಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ಯಾರಿಗೂ ನನ್ನನ್ನು ಅಭ್ಯರ್ಥಿ ಮಾಡಿ ಎಂದು ಹೇಳಿಲ್ಲಈಗ ಅದನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ಜನರ ಸಮಸ್ಯೆ ಆಲಿಸಿ ನ್ಯಾಯ ಒದಗಿಸೋಣ. ಕೊರೋನಾ ಕಾಲದಲ್ಲಿ ಜೀವ ಇದ್ದರೆ ಜೀವನ ಎಂದರು.ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ವಿಚಾರ ಈಗ ಅದನ್ನೆಲ್ಲ ಚರ್ಚೆ ಮಾಡುವ ಅಗತ್ಯ ಇಲ್ಲ. ಇದೆಲ್ಲ ಪಕ್ಷದ ಒಳಗೆ ತಿರ್ಮಾನಿಸುವ ವಿಚಾರವಾಗಿದ್ದು ಈಗ ನಾನು ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ.ನಮ್ಮ ರಾಜ್ಯಕ್ಕೆ ಹೆಚ್ಚಿನ ಅವಕಾಶಗಳು ಸಿಗಲಿ.ಹೊಸದಾಗಿ ಆಯ್ಕೆಯಾಗುವವರು ರಾಜ್ಯದ ಧ್ವನಿಯಾಗಲಿ
ನಮ್ಮ 25 ಸಂಸದರು ಬಾಯಿಮುಚ್ಚಿಕೊಂಡು ಇದ್ದಾರೆ
ಸಂಸದರು ನಮ್ಮ ರಾಜ್ಯದ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ವ್ಯಾಕ್ಸಿನ್ ಹಂಚಿಕೆಯಲ್ಲಿ ಬಹಳ ತಾರತಮ್ಯ ಆಗುತ್ತಿದೆ
ಗುಜರಾತ್ ಮತ್ತು ಕರ್ನಾಟಕದ ವ್ಯಾಕ್ಸಿನ್ ಹಂಚಿಕೆಯ ತುಲನೆಯಾಗಲಿ ರಾಜ್ಯದ ಎಂಪಿಗಳು ಇನ್ನಾದರೂ ಮಾತನಾಡಲಿ. ಗುಜರಾತಿಗೆ ಅತಿಹೆಚ್ಚು ವ್ಯಾಕ್ಸಿನ್ ಕಳುಹಿಸಿಕೊಡಲಾಗುತ್ತಿದೆ. ಕರ್ನಾಟಕದಲ್ಲಿ ವ್ಯಾಕ್ಸಿನ್ ಸಿಗದೇ ಜನ ಹೊಡೆದಾಡಿಕೊಳ್ಳುತ್ತಿದ್ದಾರೆ.ಕರ್ನಾಟಕಕ್ಕೆ ಸುಣ್ಣ ಗುಜರಾತಿಗೆ ಬೆಣ್ಣೆ ಎಂಬಂತಾಗಿದೆ. ಸರ್ಕಾರ ಹೇಳುತ್ತಿರುವ ವ್ಯಾಕ್ಸಿನೇಷನ್ ನಂಬರ್ ಗಳು ಭೋಗಸ್.ರಾಜ್ಯದ ಆರೋಗ್ಯ ಸಚಿವರು ದೆಹಲಿಗೆ ಹೋಗಿದ್ದಾರೆ. ವ್ಯಾಕ್ಸಿನ್ ಇವಾಗ ಕೊಟ್ಟಿಲ್ಲ ಅಂದ್ರೆ ಮತ್ತೆ ಯಾವಾಗ ಕೊಡುತ್ತೀರಿ.? ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡಲಾಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಅಸಡ್ಡೆ ಎನ್ನುವಂತಿದೆ. ಖಾಸಗಿಯವರಿಗೆ ಲಸಿಕೆ ಕೊಡುತ್ತಾರೆ. ಉಚಿತ ಲಸಿಕೆ ಕೊಡಲು ತಾರತಮ್ಯ ಮಾಡುತ್ತಾರೆಂದು ಆರೋಪಿಸಿದರು.

ಮುರುಗೇಶ್ ನಿರಾಣಿಗೆ ಹೈಕಮಾಂಡ್ ಬುಲಾವ್ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಯಾರನ್ನು ಬೇಕಾದರೂ ಬಿಜೆಪಿ ಸಿಎಂ ಮಾಡಲಿ. ಇದನ್ನು ಪ್ರಶ್ನಿಸುವುದು ಕಾಂಗ್ರೆಸ್ ಗೆ ಕೆಲಸ ಅಲ್ಲ. ಕಾಂಗ್ರೆಸ್ ಬಳಿ ಸರಕಾರ ಮಾಡಲು ನಂಬರ್ ಇಲ್ಲ. ಯಡಿಯೂರಪ್ಪನವರ ಬಗ್ಗೆ ಖಾಲಿ ಮಾತು ಯಾಕೆ ಮಾತನಾಡಲಿ. ಅವರ ಪಾರ್ಟಿಯಲ್ಲಿ ಏನೇನೋ ಜೋರಾಗಿ ಶಬ್ದ ಮಾಡುತ್ತಿರುತ್ತವೆ.ಎಮ್ಟಿ ವೆಸಲ್ಸ್ ಮೇಕ್ ಮೋರ್ ಸೌಂಡ್. ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ ಎಂದು ಸಚಿವ ಯೋಗೀಶ್ವರ್ ಶಾಸಕ ಯತ್ನಾಳ್ ಗೆ ಖಾಲಿ ಪಾತ್ರೆಯೆಂದು ಡಿ.ಕೆ ಶಿವಕುಮಾರ್‌ ಟಾಂಗ್ ನೀಡಿದರು.

Comments are closed.