ಉಡುಪಿ: ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆ,ಅಂಪಾರ್,ಉಳ್ಳೂರು,ಹೊಸಂಗಡಿ,ಅಜ್ರಿ,ವಕ್ವಾಡಿ, ಕುಂದಾಪುರದ ಅರ್ಹ ಫಲಾನುಭವಿ 114 ಕುಟುಂಬಕ್ಕೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು.ಜಿಲ್ಲಾದ್ಯಂತ 3700 ವರೆಗೆ ಕಿಟ್ ಗಳನ್ನು ನೀಡಲಾಗಿದೆ.

ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಕೆ ಅಶೋಕ್ ಇವರ ಮನವಿ ಮೇರೆಗೆ ಮತ್ತು ಮುಳ್ಳುಗುಡ್ಡೆ 2ನೇ ವಾರ್ಡ್ ನಲ್ಲಿ ಗುರುಪ್ರಸಾದ್ ಶೆಟ್ಟಿ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಶೆಟ್ಟಿ,ನವೀನ್ ಶೆಟ್ಟಿ,ಕೃಷ್ಣ ಕೊಟ್ಟಾರಿ ,ಮಂಜುನಾಥ್ ಉಪಸ್ಥಿತರಿದ್ದರು.
ಉಳ್ಳೂರು 74 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಮನವಿ ಮೇರೆಗೆ,ಹೊಸಂಗಡಿ ಗ್ರಾಮ ಪಂಚಾಯತ್ ಗೆ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ರವರ ಮನವಿ ಮೇರೆಗೆ,ಹಟ್ಟಿಯಂಗಡಿ ಮೇಳದ ಸಂಚಾಲಕರಾದ ರಂಜಿತ್ ಕುಮಾರ್ ಶೆಟ್ಟಿ ಇವರ ಮನವಿ ಮೇರೆಗೆ ಕಲಾವರ ಪಂಚಾಯತ್ ಅಧ್ಯಕ್ಷೆ ಆಶಾಲತಾ ರವರಿಗೆ ಕಿಟ್ ಹಸ್ತಾಂತರಿಸಲಾಯಿತು.
ಆಜ್ರಿ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಶೆಟ್ಟಿ ಆಜ್ರಿ ಮನವಿ ಮೇರೆಗೆ ಅಧ್ಯಕ್ಷ ರಾದ ಅಶೋಕ್ ಕುಲಾಲ್ ರವರಿಗೆ ಕಿಟ್ ಹಸ್ತಾಂತರಿಸಲಾಯಿತು,ಈ ಸಂದರ್ಭದಲ್ಲಿ ಸದಸ್ಯರಾದ ಮೂರ್ತಿ ಶೆಟ್ಟಿ, ಮಾದವ ಶೆಣೈ,ಬೇಬಿ,ಸಂದೀಪ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಮಲಬಾರ್ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ,ರಾಘವೇಂದ್ರ ಭಟ್,
ತಸ್ಲಿಮ್, ಉಪಸ್ಥಿತರಿದ್ದರು.
Comments are closed.