ಕರಾವಳಿ

ಹೋಂ ಐಸೋಲೇಷನ್ ಆದವರ ಮನೆಗಳಿಗೆ ಉಡುಪಿ ಶಾಸಕ ರಘುಪತಿ ಭಟ್ ಭೇಟಿ

Pinterest LinkedIn Tumblr

ಉಡುಪಿ: ಕೋವಿಡ್ – 19 ನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ‌ ಶಾಸಕ ಕೆ. ರಘುಪತಿ ಭಟ್ ರವರು ಈ ಸೋಂಕು ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿಯೇ ಐಸೋಲೇಷನ್ ಆದವರ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ಕೋವಿಡ್ – 19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಿ ಸಮಸ್ಯೆಯಾದರೆ ಕೋವಿಡ್ ಕೇರ್ ಸೆಂಟರ್ ಗೆ ಸೇರುವಂತೆ ವಿನಂತಿಸಿದರು.

ಉಡುಪಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ಸೋಂಕಿತರು ಇರುವ ಮನೆಯನ್ನು ಕಳೆದ ಬಾರಿಯಂತೆ ಈ ಬಾರಿಯೂ ಸೀಲ್ ಡೌನ್ ಮಾಡಲು ಸರಕಾರ ಸೂಚಿಸಿದೆ. ಮನೆಯ ಯಾವುದೇ ಸದಸ್ಯರು ಹೊರ ಬರುವಂತಿಲ್ಲ. ಅಗತ್ಯ ಸಾಮಗ್ರಿ ಬೇಕಾದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವುದು. ಅಥವಾ ಪ್ರತಿನಿತ್ಯ ಮನೆಗೆ ಭೇಟಿ ನೀಡುವ ಕೋವಿಡ್ ನಿಯಂತ್ರಣ ಟಾಸ್ಕ್ ಫೋರ್ಸ್ ತಂಡದವರಲ್ಲಿ ತಿಳಿಸಲು ಸೂಚಿಸಿ ಮನೆಯಲ್ಲಿ ಐಸೋಲೇಷನ್ ಕಷ್ಟವಾದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಲು ಮನವರಿಕೆ ಮಾಡಲಾಯಿತು.

ತೆಂಕನಿಡಿಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್, ಅಧ್ಯಕ್ಷರಾದ ಗಾಯತ್ರಿ, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Comments are closed.