ಕರಾವಳಿ

ಲಾಕ್ಡೌನ್ ನಡುವೆ ಜನರಿಗೆ ಉದ್ಯೋಗಕ್ಕೆ ಪ್ರೇರಣೆ: ಊರ ಕೆರೆಯ ಅಭಿವೃದ್ಧಿಗೆ ಮುಂದಾದ ಕುಂಭಾಸಿ ಗ್ರಾ.ಪಂ‌ ..!

Pinterest LinkedIn Tumblr

ಕುಂದಾಪುರ: ಲಾಕ್ಡೌನ್ ನಡುವೆ ತಮ್ಮ ಊರಿನ ಕೆರೆಯನ್ನು ಉದ್ಯೋಗ ಖಾತ ಖಾತ್ರಿ ಯೀಜನೆ, ಜಲಮೂಲ ಪುನಶ್ಚೇತನದಡಿ ಹೂಳೆತ್ತುವ ಕಾರ್ಯಕ್ಕೆ ಸ್ಥಳೀಯ ಜನರು ಮುಂದಾಗಿದ್ದಾರೆ.

ಕುಂಭಾಸಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೆಗ್ಗೂರು ಬೆಟ್ಟು ಎನ್ನುವಲ್ಲಿರುವ ಶೇಡಿಕೆರೆ ಪುನಶ್ಚೇತನಕ್ಕೆ ಕುಂಭಾಶಿ ಗ್ರಾಮಪಂಚಾಯತ್ ಮುಂದಾಗಿದ್ದು ಗ್ರಾ.ಪಂ ಸದಸ್ಯ ಆನಂದ ಪೂಜಾರಿ ಈ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾ.ಪಂ ಸದಸ್ಯೆ ರಾಧಾದಾಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಸ್ಥಳೀಯ ಪ್ರಮುಖರಾದ ನರಸಿಂಹ ಪೂಜಾರಿ, ಪಾಂಡು ಪೂಜಾರಿ, ಅರ್ಜುನ್ ದಾಸ್ ಉಪಸ್ಥಿತರಿದ್ದರು.

ಪುರಾತನ ಕೆರೆಗೆ ಕಾಯಕಲ್ಪ…
ಹಲವು ವರ್ಷಗಳಿಂದ ಹೂಳೆತ್ತದ ಬೃಹತ್ ಕೆರೆಗೆ ಈ ಮೂಲಕ ಕಾಯಕಲ್ಪ ಸಿಗಲಿದೆ. ಈ ಭಾಗದ ಕೃಷಿ ಕಾಯಕಗಳಿಗೆ ಈ ಕೆರೆ ಆಧಾರವಾಗಿದ್ದು ಹೂಳೆತ್ತಿರಲಿಲ್ಲ.ಕುಂಭಾಶಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲ ಕೆರೆ ಹೂಳೆತ್ತುವಿಕೆ ಕಾರ್ಯ ಇದಾಗಿದೆ.

ಕೊರೋನಾ ಸಂದರ್ಭ ಕೆಲಸವಿಲ್ಲದೆ ಇರುವರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ‌. ಜೊತೆಗೆ ಊರ ಕೆರೆಯ ಅಭಿವೃದ್ಧಿ ಮಾಡಲು‌ ಸಹಾಯಕವಾಗಿದೆ. ಕೊರೋನಾ ನಿಯಮಾವಳಿಯಂತೆ ಸಾಮಾಜಿಕ ಅಂತರ ಪಾಲನೆಯಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಪಿಡಿಒ ಜಯರಾಂ ಶೆಟ್ಟಿ ತಿಳಿಸಿದ್ದಾರೆ

Comments are closed.