ಅಂತರಾಷ್ಟ್ರೀಯ

ಈ ದ್ವೀಪದಲ್ಲಿ ಕೆಲಸ ಮಾಡುವ ದಂಪತಿಗೆ ವರ್ಷಕ್ಕೆ ಕೊಡುವ ಸಂಬಳ ಕೇಳಿದ್ರೆ ಖಂಡಿತ ನೀವು ಶಾಕ್ ಆಗ್ತೀರಿ…..!

Pinterest LinkedIn Tumblr

ಈ ಪ್ರಪಂಚದಲ್ಲಿ ಕೆಲವೊಂದು ಕೆಲಸಗಳಿವೆ. ಆ ವೃತ್ತಿ ಕೇಳುವುದಕ್ಕೂ ಬಹು ಅಪರೂಪ ಅನ್ನಿಸುತ್ತದೆ. ಜೊತೆಗೆ ಸಂಬಳವಂತೂ ಇನ್ನೂ ವಿಶಿಷ್ಟವಾಗಿರುತ್ತದೆ. ಅದರಲ್ಲಿ ಸಿರಿವಂತರ ಮನೆಯ ಮ್ಯಾನೇಜ್ಮೆಂಟ್‌ ಕೂಡ ಒಂದು. ಈ ಕೋವಿಡ್ 19 ಸಂದರ್ಭದಲ್ಲಿ ಬಹಾಮಾಸ್ ಖಾಸಗಿ ದ್ವೀಪದಲ್ಲಿ ತಮ್ಮ ನಿವಾಸವನ್ನು ನೋಡಿಕೊಳ್ಳಲು ಅತಿ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಸಿರಿವಂತ ಕುಟುಂಬ ಪ್ರಯಾಣ ಮಾಡಲಿಚ್ಛಿಸುವ ಮನೆ ಕೆಲಸ ಮಾಡುವವರಿಗೆ ವಿಶೇಷ ಕೊಡುಗೆ ನೀಡುತ್ತಿದೆ.

ಈ ಸಂದರ್ಶನದಲ್ಲಿ ಆಯ್ಕೆಯಾದ ದಂಪತಿ ಇಟಲಿಯ ನ್ಯಾಪಲ್ಸ್‌, ಫ್ಲೋರಿಡಾ ಮತ್ತು ಬಹಾಮಾಸ್ ನಡುವಿನ ಸಿರಿವಂತ ಕುಟುಂಬದ ಮನೆಗಳನ್ನು ವಾರದ ದಿನದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ನೋಡಿಕೊಳ್ಳಬೇಕಾಗುತ್ತದೆ. ಈ ರೀತಿ ಕಾರ್ಯ ನಿರ್ವಹಿಸುವ ದಂಪತಿಗೆ ಪ್ರತ್ಯೇಕ ವಾಸಗೃಹದ ವ್ಯವಸ್ಥೆಯೂ ಇರುತ್ತದೆ ಎಂದು ಪೋಲೊ ಮತ್ತು ಟ್ವೀಡ್ ಏಪ್ರಿಲ್ 28 ರಂದು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ ಈ ಕುರಿತು ಒಂದು ಸಣ್ಣ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಈ ನುರಿತ ಮತ್ತು ಅನುಭವಿ ಮನೆ ಕೆಲಸ ಮಾಡುವ ದಂಪತಿ, ಶ್ರೀಮಂತ ಕುಟುಂಬದ ಫ್ಲೋರಿಡಾದಲ್ಲಿನ ಮೂರು ಮನೆಗಳನ್ನು ಒಳಗೊಂಡಿರುವ ಒಂಬತ್ತು ಸ್ನಾನಗೃಹಗಳನ್ನು ಹೊಂದಿರುವ ಬೃಹತ್ ಎಸ್ಟೇಟ್ ಅನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು.

ಜೊತೆಗೆ ಬಹಮಾಸ್ ಎಸ್ಟೇಟ್ ಪ್ರತಿ ಮನೆಯಲ್ಲಿ ನಾಲ್ಕು ಬೆಡ್ ರೂಂ ಇರುವ ನಾಲ್ಕು ಮನೆಗಳನ್ನು ಒಳಗೊಂಡಿದ್ದು, ಅದನ್ನು ನಿಭಾಯಿಸುವ ಹೊಣೆ ಕೆಲಸಗಾರರ ಮೇಲಿರುತ್ತದೆ.

ಇನ್ನು, ಈ ಕೆಲಸ ನಿರ್ವಹಿಸಲು ವೃತ್ತಿಪರರನ್ನು ಹುಡುಕುತ್ತಿದ್ದು, ಅವರಿಗೆ ಆರೋಗ್ಯ , ದಂತಚಿಕಿತ್ಸೆ ಸೌಲಭ್ಯ, ಕೆಲಸಕ್ಕೆ ಅನುಕೂಲವಾಗುವಂತೆ ಕಾರು ಮತ್ತು ವೇತನ ಸೇರಿ ಒಂದು ವರ್ಷಕ್ಕೆ 100,000 ರಿಂದ 120,000 ಡಾಲರ್ ಅಂದರೆ ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ 1 ಕೋಟಿ ರೂ. ಗೂ ಅಧಿಕ ಹಣ ನೀಡಲಾಗುತ್ತದೆ.

ಕೋವಿಡ್ 19 ಕಾರಣದಿಂದ ತಮ್ಮ ಇಬ್ಬರು ವಯಸ್ಕ ಮಕ್ಕಳೊಂದಿಗೆ 80 ರಷ್ಟು ಸಮಯವನ್ನು ಬಹಾಮಾಸ್‌ನಲ್ಲಿ ಕಳೆಯುತ್ತಿರುವ ಈ ಕುಟುಂಬವು ಒಟ್ಟು ನಾಲ್ವರು ಸದಸ್ಯರನ್ನು ಒಳಗೊಂಡಿದೆ. ಹೆಚ್ಚು ಶ್ರೀಮಂತ ಕುಟುಂಬ ಇದಾಗಿದ್ದು, ಇವರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಅಲ್ಲದೇ ಈ ಕುಟುಂಬ ಸ್ನೇಹಪರವಾಗಿದ್ದು, ಶಾಂತವಾಗಿ ನಡೆಸಿಕೊಳ್ಳುವ ಸೌಜನ್ಯಪೂರ್ಣ ಕುಟುಂಬ ಎಂದು ವಿವರಣೆ ಲಭ್ಯವಾಗಿದೆ.

ಇನ್ನು ಇಲ್ಲಿ ಕೆಲಸ ಮಾಡುವ ದಂಪತಿ ಈ ಮನೆಗೆ ಬರುವ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದು, ಮನೆಯ ಕೆಲಸ ಮಾಡುವುದು, ಗೃಹ ನಿರ್ವಹಣೆ, ನಿವಾಸವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಲಗುವ ಕೋಣೆಯ ಹಾಸಿಗೆ ಸಿದ್ಧ ಪಡಿಸುವುದು, ಸ್ನಾಹ ಗೃಹದ ಸ್ವಚ್ಚತೆ ಮತ್ತು ನಿರ್ವಹಣೆ ನೋಡಿಕೊಳ್ಳುವುದು, ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಬಟ್ಟೆಗಳನ್ನು ಶುಭ್ರಮಾಡುವುದು, ಅತಿಥಿಗಳ ಬೇಕು – ಬೇಡಗಳನ್ನು ಗಮನಿಸಿಕೊಳ್ಳುವುದು, ಎಲ್ಲೂ ತಪ್ಪುಗಳಾಗದಂತೆ ಗಮನವಹಿಸುವುದು ಈ ಎಲ್ಲಾ ಜವಾಬ್ದಾರಿ ನಿಭಾಯಿಸಬೇಕು. ಇದೆಲ್ಲವನ್ನು ಮಾಡುವಂತಹ ಸಾಮರ್ಥ್ಯವಿರುವ ವೃತ್ತಿಪರರಿಗೆ ಆದ್ಯತೆ ನೀಡುತ್ತಿದೆ. ಆದ್ದರಿಂದ ಉತ್ತಮ ನಡವಳಿಕೆಯುಳ್ಳ, ವಿವೇಚನಾಯುಕ್ತ ಮನೆ ಕೆಲಸ ಮಾಡುವ ದಂಪತಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.ಪೋಲೋ ಮತ್ತು ಟ್ವೀಡ್‌ನ ಸಂಸ್ಥಾಪಕ ಲೂಸಿ ಚಾಲೆಂಜರ್ ಖಾಸಗಿ ಪತ್ರಿಕೆ ಜೊತೆಗೆ ಮಾತನಾಡಿ ‘ಇದು ಜೀವಿತಾವಧಿಯಲ್ಲಿ ಒಮ್ಮೆ ಬರುವ ಅವಕಾಶವಾಗಿದೆ. ಇಂತಹ ಅಪರೂಪದ ಅವಕಾಶವನ್ನು ನಮ್ಮ ವೆಬ್‌ಸೈಟ್ನಲ್ಲಿ ಪೋಸ್ಟ್ ಮಾಡಿದಾಗಿನಿಂದಲೂ ಅಭ್ಯರ್ಥಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದನ್ನು ನಿಭಾಯಿಸುವುದೇ ಈಗ ಸವಾಲಾಗಿದೆ. ಸದ್ಯ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡುತ್ತಿದ್ದು, ಆಸಕ್ತ ದಂಪತಿ ಈಗಲೂ ಕೂಡ ತಮ್ಮ ರೆಸ್ಯೂಮ್ ಕಳಿಸಬಹುದಾಗಿದೆ. ಆದಷ್ಟು ಬೇಗ ಸರಿಯಾದ ಅಭ್ಯರ್ಥಿಗಳನ್ನು ಈ ಕುಟುಂಬ ಸಂದರ್ಶನಕ್ಕೆ ಕರೆಯುತ್ತದೆ’ ಎಂದು ಹೇಳಿದ್ದಾರೆ.

ಈ ಉದ್ಯೋಗದಲ್ಲಿ ಹುಬ್ಬೇರಿಸುವಂತಹ ಇನ್ನೊಂದಿಷ್ಟು ಸೌಕರ್ಯಗಳಿವೆ. ಈ ಎಲ್ಲಾ ಮನೆಗಳಿಗೆ ಪ್ರಯಾಣಿಸಲು ಖಾಸಗಿ ಜೆಟ್ ಕೂಡ ನೀಡುತ್ತಿದೆ. ಅಲ್ಲದೇ ಪ್ರತ್ಯೇಕ ವಸತಿ ಸೌಲಭ್ಯವನ್ನು ಕೊಡುತ್ತಿದೆ. ಇಂತಹ ಅವಕಾಶ ಸಿಕ್ಕರೆ ಬಿಟ್ಟವರುಂಟೆ ? ಅಂತೀರಾ!

Comments are closed.