ಉಡುಪಿ: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೇಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಶಂಕರಪುರ ಸುಭಾಸ್ ನಗರದ ಕ್ಯಾಲ್ವಿನ್ ಕಸ್ತಲಿನೋ(21), ಜಾಬಿರ್(18), ರಿಝಾನ್(28) ಎಂದು ಗುರುತಿಸಲಾಗಿದೆ.

ಇವರು ಮೂವರು ಹೊಳೆಯಲ್ಲಿ ಈಜುತ್ತಿದ್ದಾಗ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಮುಳುಗು ತಜ್ಞರ ಸಹಾಯದಿಂದ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು.
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿದ್ದಾರೆ.
Comments are closed.