ಕ್ರೀಡೆ

ಬಟ್ಲರ್ ಬ್ಯಾಟಿಂಗ್, ರೆಹಮಾನ್-ಮೋರಿಸ್ ಮಾರಕ ದಾಳಿಗೆ ನಲುಗಿದ ಹೈದರಾಬಾದ್; ರಾಜಸ್ಥಾನ್ ತಂಡಕ್ಕೆ 55 ರನ್‍ಗಳ ಜಯ

Pinterest LinkedIn Tumblr

ಡೆಲ್ಲಿ: ಬಟ್ಲರ್ ಬಿರುಗಾಳಿ ಬ್ಯಾಟಿಂಗ್, ಮುಸ್ತುಫಿಸರ್ ರೆಹಮಾನ್ ಮತ್ತು ಕ್ರೀಸ್ ಮೋರಿಸ್ ಮಾರಕ ದಾಳಿಗೆ ನಲುಗಿದ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ತಂಡಕ್ಕೆ ಶರಣಾಗಿದೆ.

ಗೆಲ್ಲಲು 221 ರನ್‍ಗಳ ಬೃಹತ್ ಮೊತ್ತ ಗುರಿ ಪಡೆದ ಹೈದರಾಬಾದ್ ತಂಡ 20 ಓವರ್‍ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಜಸ್ಥಾನ ತಂಡ 55 ರನ್ ಗಳ ಜಯ ಗಳಿಸಿತು.

ರಾಜಸ್ಥಾನ್ ಪರ ಮಾರಕದಾಳಿ ನಡೆಸಿದ ಮುಸ್ತುಫಿಸರ್ ರೆಹಮಾನ್ ಮತ್ತು ಕ್ರೀಸ್ ಮೋರಿಸ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಹೈದರಾಬಾದ್‍ಗೆ ಮುಳುವಾದರು.

ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಮನೀಶ್ ಪಾಂಡೆ 31ರನ್(20 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಜಾನಿ ಬೈರ್‍ಸ್ಟೋವ್ 30ರನ್(21 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದನ್ನು ಹೊರತು ಪಡಿಸಿದರೆ ಬೇರೆ ಯಾರು ಕೂಡ ಹೈದಾರಾಬಾದ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ನೆರವಾಗಲಿಲ್ಲ. ಮಧ್ಯಮಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ 20 ರನ್ (21 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಇವರೊಂದಿಗೆ ಕೇದರ್ ಜಾದವ್ 19 ರನ್(19 ಎಸೆತ, 1 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಕುಸಿತ ಕಂಡ ಹೈದರಾಬಾದ್ ತಂಡ ಅಂತಿಮವಾಗಿ 55ರನ್‍ಗಳ ಅಂತರದಿಂದ ಸೋಲು ಕಂಡಿತು.

ಬಟ್ಲರ್ ಸ್ಪೋಟಕ ಇನ್ನಿಂಗ್ಸ್
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಹೊಡಿಬಡಿ ಬ್ಯಾಟಿಂಗ್ ಮೂಲಕ ಹೈದರಾಬಾದ್ ತಂಡದ ಬೌಲರ್‍ಗಳನ್ನು ಚೆಂಡಾಡಿದರು. ಭರ್ಜರಿ ಶತಕ ಸಿಡಿಸಿ ಮೆರೆದಾಡಿದ ಬಟ್ಲರ್ 124 ರನ್(64 ಎಸೆತ, 11 ಬೌಂಡರಿ, 8 ಸಿಕ್ಸ್) ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸ್ ನ್ 48 ರನ್(33 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ, ಬಟ್ಲರ್ ಜೊತೆ ಎರಡನೇ ವಿಕೆಟ್‍ಗೆ 150ರನ್(88 ಎಸೆತ) ಜೊತೆಯಾಟವಾಡಿ ಔಟ್ ಆದರು.

ಕೊನೆಯಲ್ಲಿ ರಾಜಸ್ಥಾನ್ ಪರ ರಿಯಾನ್ ಪಾರಾಗ್ 15 ರನ್(8 ಎಸೆತ, 1 ಸಿಕ್ಸ್) ಮತ್ತು ಡೇವಿಡ್ ಮಿಲ್ಲರ್ 7 ರನ್ (3 ಎಸೆತ, 1 ಸಿಕ್ಸ್) ಸಿಡಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು. 20 ಓವರ್‍ ಗಳ ಮುಕ್ತಾಯಕ್ಕೆ ರಾಜಸ್ಥಾನ ತಂಡ 3 ವಿಕೆಟ್ ಕಳೆದುಕೊಂಡು 220 ರನ್ ಮಾಡಿತು.

Comments are closed.