ಕರಾವಳಿ

ಚಂದ್ರದರ್ಶನ ಹಿನ್ನೆಲೆ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ

Pinterest LinkedIn Tumblr

ಮಂಗಳೂರು/ಉಡುಪಿ: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಸೋಮವಾರ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ತಿಳಿಸಿರುವುದಾಗಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ, ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ….
ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ಉಡುಪಿ ಜಿಲ್ಲಾ ಖಾಝಿ ಅಲ್ ಹಾಜಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Comments are closed.