ಕರಾವಳಿ

ಪೂರ್ಣ ಶುಲ್ಕ ನೀಡಲು ವಿದ್ಯಾರ್ಥಿಗಳ‌ ಪೋಷಕರಿಗೆ ಕುಂದಾಪುರದ ಖಾಸಗಿ ಇಂಗ್ಲಿಷ್ ಮಿಡಿಯಂ ಸ್ಕೂಲ್‌ವೊಂದರಿಂದ ಒತ್ತಡ

Pinterest LinkedIn Tumblr

ಕುಂದಾಪುರ: ಇಲ್ಲಿನ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪೂರ್ಣ ಶುಲ್ಕವನ್ನು ಭರಿಸುವಂತೆ ಕಾಲೇಜ್ ಆಡಳಿತ ಮಂಡಳಿ ಹೆತ್ತವರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು.

ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಿದ್ದಾರೆ. ಆದರೆ ಪರೀಕ್ಷೆಯ ಅಂಕಗಳನ್ನು ಮತ್ತು ಪೇಪರ್ ಅನ್ನು ತೋರಿಸುತ್ತಿಲ್ಲ. ಪೂರ್ಣ ಶುಲ್ಕ ಭರಿಸಿದವರಿಗೆ ಮಾತ್ರ ಪೇಪರ್ ನೋಡಲು ಅವಕಾಶ ಎಂದು ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಬೆದರಿಕೆ ಹಾಕಿದೆ ಎಂದು ವಿದ್ಯಾರ್ಥಿಗಳ ಹೆತ್ತವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪೋಷಕ ಶ್ರೀಧರ್ ಕೋಟೇಶ್ವರ ಈಗಾಗಲೇ 2 ಕಂತನ್ನು ಕಟ್ಟಿದ್ದೇವೆ. ಈಗ ಪೂರ್ಣ ಕಂತು ಕಟ್ಟಿ ಎಂದು ಒತ್ತಡ ಹಾಕುತ್ತಿದ್ದಾರೆ. ನಿರಂತರ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ 30% ರಿಯಾಯಿತಿ ನೀಡಲು ಹೇಳಿದೆ ಎಂದು ಪ್ರಶ್ನಿಸಿದರೇ ಅದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಕಣ್ಣೀರು ಹಾಕಿದರು.

ಪೋಷಕಿ ಮಮತಾ ಮಾತನಾಡಿ, ಲಾಕ್ ಡೌನ್ ನಂತರ ಕೆಲಸ ಇದ್ದರೇ ಗಂಡ ಮನೆಯಲ್ಲಿದ್ದಾರೆ. ಈಗ ಪೂರ್ಣ ಶುಲ್ಕ ಭರಿಸಿ ಎಂದರೇ ಎಲ್ಲಿಂದ ತರೋಣ. 1-5 ನೇ ತರಗತಿಯವರಿಗೆ ಇಲ್ಲ 6 ನೇ ತರಗತಿಯಿಂದ ಶುಲ್ಕ ಭರಿಸಲೇ ಬೇಕು ಎಂದು ಶಾಲಾ ಆಡಳಿತ ಮಂಡಳಿ ತಾಕೀತು ಮಾಡುತ್ತಿದೆ ಎಂದು ಆರೋಪಿಸಿದರು.

Comments are closed.