ಕರಾವಳಿ

10 ಗ್ರಾಮಗಳ ಪಡ್ರೆ ರಾಜಕಾಲುವೆಗೆ ಪೈಪ್‌ಲೈನ್ ಶಾಪ! ಕೊಳವೆ ತೆಗೆಯದಿದ್ದರೆ ಈ ವರ್ಷವೂ ಕೃತಕ ನೆರೆ ಸಮಸ್ಯೆ

Pinterest LinkedIn Tumblr

ಮಂಗಳೂರು / ಸುರತ್ಕಲ್: ಮಳೆ ನೀರು ಹರಿದು ನಂದಿನಿ ನದಿಯ ಒಡಲನ್ನು ಸೇರುವ ಸುರತ್ಕಲ್ ಸಮೀಪದ ಪಡ್ರೆ ಬಳಿಯ ಬೃಹತ್ ರಾಜಕಾಲುವೆಗೆ ಅಡ್ಡಲಾಗಿ ಹಾಕಲಾದ ಪೈಪ್‌ಲೈನ್ ಇದೀಗ ಮುಂಚೂರಿನ ಜನತೆಗೆ ಶಾಪವಾಗಿ ಪರಿಣಮಿಸಿದೆ.

ಕಳೆದ ಹಲವಾರು ವರ್ಷ ಗಳಿಂದ ಪಡ್ರೆ,ಮುಂಚೂರು ಪ್ರದೇಶದ ತಗ್ಗು ಪ್ರದೇಶ ಜಲಾವೃತವಾಗುತ್ತಿದ್ದು ಮಳೆಗಾಲದ ಸಂದರ್ಭ ಹಲವಾರು ಮನೆಗಳ ನಿವಾಸಿಗಳು ಕುಟುಂಬ ಸಮೇತ ಗುಳೇ ಹೋಗುವ ಅನಿವಾರ್ಯ ಸ್ಥಿತಿ ಎದುರಾಗಿದೆ.

ದೂರದ ಕಾಟಿಪಳ್ಳ, ಕಟ್ಲ, ಸುರತ್ಕಲ್ ಸಹಿತ ಮಳೆ ನೀರು ಹರಿಯುವ ರಾಜ ಕಾಲುವೆ ಪಡ್ರೆ ಭಾಗದಲ್ಲಿ ಹರಿದು ನಂದಿನಿ ನದಿ ಸೇರುತ್ತದೆ. ಕುತ್ತೆತ್ತೂರಿನಲ್ಲಿ ಬೃಹತ್ ಕಂಪನಿ ಆದ ಬಳಿಕ ಅಲ್ಲಿನ ಅನುಪಯುಕ್ತ ನೀರನ್ನು ಸಮುದ್ರಕ್ಕೆ ಬಿಡಲು ಹಾಕಿದ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕ ವಾಗಿದ್ದು, ಇದರಿಂದ ಮಳೆ ನೀರು ಹರಿಯುವ ರಾಜಕಾಲುವೆಗೆ ತಡೆಯಾಗಿ ಪರಿಣಮಿಸಿದೆ.

ಮೂರು ಸಿಮೆಂಟ್ ಕೊಳವೆಗಳನ್ನು ಹಾಕಿ ಅದರ ಮೇಲ್ಭಾಗದಲ್ಲಿ ಪೈಪ್‌ಲೈನ್ ಹಾಕಲಾಗಿದೆ. ಟಿಎಂಸಿ ಗಟ್ಟಲೆ ನೀರು ಹರಿಯುವ ರಾಜಕಾಲುವೆಗೆ ಚಿಕ್ಕದಾದ ಕೊಳವೆ ಅಳವಡಿಸಿದ ಕಾರಣ ಪ್ರಕೃತಿ ಸಹಜ ಮಳೆ ನೀರಿನ ಹರಿವಿಗೆ ತಡೆಯಾಗಿದೆ.

2019ರ ಭಾರೀ ಮಳೆಗೆ ಸುರತ್ಕಲ್ ಕಟ್ಲ ಪ್ರದೇಶದಿಂದ ಮುಂಚೂರುವರೆಗೆ ಕೃತಕ ನೆರೆಗೆ ಹಲವಾರು ಕುಟುಂಬಗಳ ಮನೆಗಳು ಶಿಥಿಲವಾಗಿವೆ. ಮನೆ ವಸ್ತುಗಳು ಮಳೆ ನೀರು ಪಾಲಾಗಿದ್ದು, ಕಾರಣ ಇಲ್ಲಿನ ರಾಜಕಾಲುವೆಯಲ್ಲಿ ನೀರು ಹರಿಯಲು ತಡೆಯಾಗಿದೆ. ಇದೀಗ ಅಲ್ಪ ಸ್ವಲ್ಪ ನೀರು ರಾಜಕಾಲುವೆ ಯಲ್ಲಿ ಉಳಿದಿದ್ದು, ನೀರು ನಿಂತು ದುರ್ವಾ ಸನೆ ಹರಡುತ್ತಿದೆ, ಮಾತ್ರವಲ್ಲ ಗಿಡಗಂಟಿಗಳು ಬೆಳೆದು ಮಳೆಗಾಲಕ್ಕೆ ಮತ್ತೆ ಕೃತಕ ನೆರೆ ಉದ್ಭವಿಸುವ ಮುನ್ಸೂಚನೆ ನೀಡಿದೆ.

ಇಲ್ಲಿನ ರಾಜಕಾಲುವೆ ಸರಿಪಡಿಸಿ ಕೊಡಿ ಎಂದು ಊರಿನ ಜನತೆ ಜಿಲ್ಲಾದಿ ಕಾರಿ, ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಸರಿಪಡಿಸುವ ಭರವಸೆ ಮಾತ್ರ ದೊರಕಿದೆ. ಈ ಬಾರಿಯೂ ಭರವಸೆ ಕಾರ್ಯಗತ ವಾಗದೇ ಹೋದಲ್ಲಿ ಸ್ಥಳೀಯರು ಮತ್ತೆ ಗುಳೇ ಹೋಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ.

ರಾಜ ಕಾಲುವೆಗೆ ತಡೆ :

ನೀರು ಸರಾಗವಾಗಿ ಹರಿದು ಹೋಗದೆ ಸಮಸ್ಯೆಯಾಗಲು ಮುಖ್ಯ ಕಾರಣವೇ ರಾಜ ಕಾಲುವೆಯ ಬಹುಭಾಗವನ್ನು ಮುಚ್ಚಿರುವುದಾಗಿದೆ. ಕಾಲುವೆಗೆ ಸಣ್ಣ ಗಾತ್ರದ 2-3 ಪೈಪ್‌ಗಳನ್ನು ಅಳವಡಿಸಿ ಮುಚ್ಚಿ ಅದರ ಮೇಲೆ ಕಾಂಕ್ರೀಟ್ ಪಥ ಮಾಡಿ ಅದರಲ್ಲಿ ಕಂಪೆನಿಗಳ ಪೈಪ್‌ಲೈನ್ ಅಳವಡಿಸಲಾಗಿದೆ. ಇದರಿಂದಾಗಿ ಕಾಲುವೆಯು ನಂದಿನಿ ಹೊಳೆಯನ್ನು ಸೇರುವ ಭಾಗದಲ್ಲಿ ನೀರಿನ ಹರಿವಿಗೆ ತೊಂದರೆಯಾಗಿದೆ. ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಆದ್ದರಿಂದ ಇದನ್ನು ತೆರವು ದೊಡ್ಡ ಮೋರಿ ಸಂಕದ ರೀತಿಯಲ್ಲಿ ಮಾಡಿ ನೀರಿನ ಹರಿವಿಗೆ ಇರುವಂಥ ತಡೆಯನ್ನು ನಿವಾರಿಸಬೇಕು ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿದೆ.

ರಾಜಕಾಲುವೆಗಳ ಹೂಳೆತ್ತುವಿಕೆಗೆ ಪ್ರಥಮ ಆದ್ಯತೆ ನೀಡಿದ್ದು ,ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಯಾದರೆ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಸಮ್ಮುಖ ನಡೆದ ಸಭೆಯಲ್ಲಿ ಈ ಬಗ್ಗೆ ಸ್ಪಷ್ಠ ನಿರ್ದೇಶನ ನೀಡಿದ್ದು ಇದನ್ನು ಅಧಿಕಾರಿಗಳು ಪಾಲಿಸಬೇಕು. : ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್.

2019ರ ಮಳೆಗಾಲದಲ್ಲಿ ನಮ್ಮ ಮನೆಯ ಬಾಗಿಲನ್ನು ಒಡೆದು ಹಾಕಿ ಮಳೆ ನೀರು ಅಮೂಲ್ಯ ವಸ್ತುಗಳನ್ನು ಕೊಚ್ಚಿಕೊಂಡು ಹೋಗಿದೆ. ಅಡಿಕೆ ಸಹಿತ ನಮ್ಮ ಬೆಳೆಯೂ ನೀರು ಪಾಲಾಗಿದೆ. 2020ರಲ್ಲೂ ನಾವು ನೆರೆಯ ನೀರಿನಲ್ಲಿ ಬದುಕು ಸಾಗಿಸಿದ್ದೇವೆ. ಇಲ್ಲಿನ ಪಡ್ರೆಯ ರಾಜಕಾಲುವೆ ಕೊಳವೆ ತೆಗೆದು ಕಿರು ಮೇಲ್ಸೇತುವೆ ಮಾಡಬೇಕು. ಈಗಿನ ಸಣ್ಣ ಸಿಮೆಂಟ್ ಕೊಳವೆ ತೆಗೆಯಬೇಕು. ಇಲ್ಲದಿದ್ದಲ್ಲಿ ನಮಗೆ ಕೃತಕ ನೆರೆ ಸಮಸ್ಯೆ ಜೀವನ ಪೂರ್ತಿ ಕಾಡುತ್ತದೆ. : ಭುಜಂಗ ಶೆಟ್ಟಿ, ಮುಂಚೂರು ನಿವಾಸಿ.

Comments are closed.