ಉಡುಪಿ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮನೆಯೆದುರು ನಿಲ್ಲಿಸಿದ್ದ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಉಡುಪಿ ಬಡಗುಬೆಟ್ಟು ಎಂಬಲ್ಲಿ ನಡೆದಿದೆ.
(ಸಾಂದರ್ಭಿಕ ಚಿತ್ರ)
ಪ್ರಕರಣ-1
ಬಡಗುಬೆಟ್ಟು ಬೈಲೂರು ನಿವಾಸಿ ಹರೀಶ್ ಕುಮಾರ್ ಭಟ್ (42) ಎನ್ನುವರು KA-20-EA-7128ನೇ ನಂಬರಿನ ಬಜಾಜ್ ಡಿಸ್ಕವರಿ ಮೋಟಾರ್ ಬೈಕನ್ನು ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದು ಯಾರೋ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಹರೀಶ್ ಅವರು ಮನೆಯಿಂದ ಹೊರ ಬರದಂತೆ ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಮೋಟಾರ್ ಬೈಕಿಗೆ ಬೆಂಕಿ ಹಚ್ಚಿದ ಪರಿಣಾಮ ಮೋಟಾರ್ ಬೈಕ್ ಸಂಪೂರ್ಣ ಸುಟ್ಟು ಹೋಗಿ 20 ಸಾವಿರ ನಷ್ಟ ಸಂಭವಿಸಿದೆ.
ಪ್ರಕರಣ-2: ಬಡಗುಬೆಟ್ಟು ಎನ್.ಜಿ.ಒ ಕಾಲನಿ ನಿವಾಸಿ ಅಬ್ದುಲ್ ರಶೀದ್ ತನ್ನ KA-20-AB-0533ನೇ ನಂಬರಿನ ಬಜಾಜ್ ಆಟೋರಿಕ್ಷಾವನ್ನು ತನ್ನ ಮನೆ ಗೇಟಿನ ಎದುರು ಎಂದಿನಂತೆ ಪಾರ್ಕ್ ಮಾಡಿದ್ದು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ, ಪರಿಣಾಮ ಆಟೋರಿಕ್ಷಾ ಸಂಪೂರ್ಣ ಸುಟ್ಟು ಹೋಗಿ 2,25,000/- ರೂ. ನಷ್ಟವುಂಟಾಗಿದೆ.
ಈ ಎರಡು ಘಟನೆ ಕುರಿತಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.