ಕರಾವಳಿ

ನಮ್ಮೂರಲ್ಲೇ ರಾಮಮಂದಿರ ಕಟ್ಟಿಸ್ತೇನೆ- ನಮ್ಮೂರ ರಾಮ, ದಶರಥನ‌ ಮಗ ಅಲ್ವಾ?: ಸಿದ್ಧರಾಮಯ್ಯ

Pinterest LinkedIn Tumblr

ಉಡುಪಿ: ನಾನು ಅಯೋಧ್ಯೆಯ ರಾಮಮಂದಿರಕ್ಕೆ ಹಣ ಕೊಡೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನಾನು ನಮ್ಮೂರಲ್ಲೇ ರಾಮಮಂದಿರ ಕಟ್ಟಿಸ್ತೇನೆ, ಯಾಕೆ ನಮ್ಮೂರ ರಾಮ, ದಶರಥನ‌ ಮಗ ಅಲ್ವಾ? ನಮ್ಮೂರ ರಾಮನಿಗೆ ಹಣ ಕೊಟ್ರೆ ಆಗಲ್ವಾ ಎಂದು ತನ್ನ ಟೀಕಾಕಾರನ್ನು ಪ್ರಶ್ನಿಸಿದ್ದಾರೆ.

ಅಯೋಧ್ಯೆ ನಿಧಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಬಗ್ಗೆ ನಾನೇನು ತಪ್ಪು ಹೇಳಿದ್ದೇನೆ. ಅಯೋಧ್ಯೆಗೆ ನಾನು ನಿಧಿ ಕೊಡುವುದಿಲ್ಲ, ನನ್ನೂರಿನ ರಾಮಮಂದಿರಕ್ಕೆ ಕೊಡುತ್ತೇನೆ. ನಾನು ಹೇಳಿದ್ದು ತಪ್ಪಾ? ನಮ್ಮೂರಿನಲ್ಲಿ ಆಗ್ತಿರೋದು ರಾಮಮಂದಿರ ಅಲ್ವಾ? ನನ್ನೂರಲ್ಲಿ ಕಟ್ಟುವುದು ದಶರಥ ಪುತ್ರ ರಾಮ ಮಂದಿರ ಅಲ್ವಾ? ನನ್ನ ಮಾತಿನಲ್ಲಿ ವಿವಾದ ಆಗುವಂಥದ್ದು ಏನಿದೆ ಎಂದು ಸಿದ್ದರಾಮಯ್ಯ ಆರೋಪಗಳ ವಿರುದ್ಧ ಗರಂ ಆದರು.

ಬಿಜೆಪಿಯ ಒಬ್ಬರಲ್ಲೂ ದೇಶ ನಿಷ್ಠೆ ಇಲ್ಲ, ಬಿಜೆಪಿಯಿಂದ ಯಾರು ದೇಶಕ್ಕಾಗಿ ಸತ್ತಿಲ್ಲ. ಯಾವ ಸ್ವಾಮಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಈ ಬಿಜೆಪಿಯವರು ವಿಶ್ವಮಾನವ ರಲ್ಲ ಅಲ್ಪಮಾನವರು, ಮನುಷ್ಯ ದ್ವೇಷಿಗಳು, ಇಷ್ಟಕ್ಕೂ ಸ್ವಾತಂತ್ರ್ಯ ಹೋರಾಟಕ್ಕೆ ಆರ್ ಎಸ್ ಎಸ್ ಕೊಡುಗೆ ಏನು? ಬಿಜೆಪಿಯ ಒಬ್ಬನಾದ್ರೂ ಈ ದೇಶಕ್ಕೋಸ್ಕರ ಸತ್ತಿದ್ದಾನಾ? ಹೆಡಿಗೇವಾರ್, ಗುರೂಜಿ ಸ್ವಾತಂತ್ರ್ಯ ಹೋರಾಟ ಭಾಗವಹಿಸಿದ್ರಾ? ಎಂದು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಗಾಂಧೀಜಿಯನ್ನು ಕೊಂದವರಿಂದ ದೇಶಭಕ್ತಿಯ ಪಾಠ ಬೇಕಾಗಿಲ್ಲ, ಈ ಮೋದಿ ಸ್ವಾತಂತ್ರ್ಯದ ನಂತ್ರ ಹುಟ್ಟಿದ ಗಿರಾಕಿ. ಕೇವಲ 56 ಇಂಚಿನ ಎದೆ ಇದ್ರೆ ಸಾಲಲ್ಲ, ಅದು ಬಾಡಿ ಬಿಲ್ಡರ್ ಗೂ‌ ಇರುತ್ತೆ. ಎದೆಯೊಳಗೆ ಹೃದಯ ಇರೋದು ಮುಖ್ಯ ಎಂದು ವ್ಯಂಗ್ಯವಾಡಿದ್ದಾರೆ, ಕೇವಲ ಹಿಂದುತ್ವ ಅಂತದ್ರೆ ಹೊಟ್ಟೆ ತುಂಬಲ್ಲ, ಯಾಕೆ ನಾನು ಹಿಂದೂ ಅಲ್ವಾ? ನನ್ನ ಹೆಸರಲ್ಲೇ ‘ರಾಮ‌’ ಇದಾನೆ, ನಾನು ಸಿದ್ದರಾಮಯ್ಯ, ನನ್ನದು ಮಹಾತ್ಮಾ ಗಾಂಧಿ‌ ಹಿಂದುತ್ವ. ಈ ಬಿಜೆಪಿಯವರದ್ದು ಸಾವರ್ಕರ್ ಹಿಂದುತ್ವ ಎಂದು ಕಿಡಿಕಾರಿದ್ದಾರೆ.

Comments are closed.