ಕರಾವಳಿ

ಕುಂಭಾಸಿ ಗ್ರಾಮಪಂಚಾಯತ್‌ನಲ್ಲಿ ಪಕ್ಷೇತರರಿಗೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ

Pinterest LinkedIn Tumblr

ಕುಂದಾಪುರ: ಕುಂಭಾಸಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಶ್ವೇತಾ ಮತ್ತು ಉಪಾಧ್ಯಕ್ಷರಾಗಿ ಜಗದೀಶ್ ರಾವ್ ಆಯ್ಕೆಗೊಂಡಿದ್ದಾರೆ. ಇರ್ವರು ಕೂಡ ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವುನ್ನು ಸಾಧಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಶ್ವೇತಾ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಸುಕನ್ಯ ಶೆಟ್ಟಿ ಇವರಿಂದ ಒಟ್ಟು 2 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಇವರಿಬ್ಬರ ನಡುವೆ ಮತದಾನ ನಡೆದಾಗ ಒಟ್ಟು 13 ಮತಗಳಲ್ಲಿ 9 ಮತಗಳನ್ನು ಪಕ್ಷೇತರ ಆಭ್ಯರ್ಥಿ ಶ್ವೇತಾ ಪಡೆದು ಅಧ್ಯಕ್ಷಗಾದಿಯನ್ನು ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಜಗದೀಶ್ ರಾವ್ ಒಬ್ಬರದೇ ನಾಮ ಪತ್ರ ಸಲ್ಲಿಕೆಯಾದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕುಂಭಾಸಿ ಗ್ರಾಮ ಪಂಚಾಯತ್‌ನ ಒಟ್ಟು 13 ಸ್ಥಾನಗಳ ಪೈಕಿ 5 ಬಿಜೆಪಿ, 5 ಪಕ್ಷೇತರ, 3 ಕಾಂಗ್ರೆಸ್ ಸ್ಥಾನ ಪಡೆದುಕೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಘೋಷಣೆಯಾಗಿತ್ತು. ಚುನಾವಣಾಧಿಕಾರಿ ಆರ್‌ಎಫ್‌ಒ ಪ್ರಭಾಕರ್ ಕುಲಾಲ್ ಮಂಗಳವಾರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.

Comments are closed.