ಕರಾವಳಿ

ಸರಕಾರಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಕಾಪುವಿನ ಖತರ್ನಾಕ್ ಅಸಾಮಿ ಬಂಧನ

Pinterest LinkedIn Tumblr

ಉಡುಪಿ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಹಾಗೂ ಲ್ಯಾಪ್‌‌‌ಟಾಪ್‌‌‌ ಪಡೆದುಕೊಂಡು ಜನರಿಗೆ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಉಡುಪಿಯ ಸಿಇಎನ್‌ (ಸೆನ್) ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಪು ನಿವಾಸಿ ನಿಶಾಂತ್‌ ಎಸ್‌ ಕುಮಾರ್‌ (21) ಅಲಿಯಾಸ್ ನಿತಿನ್ ಎಂದು ಗುರುತಿಸಲಾಗಿದೆ.

ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ ಈತ ಉದ್ಯೋಗ ಕೊಡಿಸುವ ಭರವಸೆ ನೀಡುತ್ತಿದ್ದ ನಿಶಾಂತ್‌ನನ್ನು ಬಂಧಿಸಿದ ಪೊಲೀಸರು ಆತನಿಂದ ಏಳು ಲ್ಯಾಪ್‌ಟಾಪ್‌ ಹಾಗೂ ಸುಮಾರು 1.50 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.

ಉಡುಪಿ ಎಸ್‌‌ಪಿ ವಿಷ್ಣುವರ್ಧನ್‌‌ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಉಡುಪಿ ಜಿಲ್ಲಾ ಸಿಇಎನ್ ವಿಭಾಗದ ನಿರೀಕ್ಷಕ ರಾಮಚಂದ್ರ ನಾಯಕ್ ಅವರು ಪ್ರಕರಣ ದಾಖಲಿಸಿದ್ದಾರೆ.

ಸಿಇಎನ್ ವಿಭಾಗದ ಸಹಾಯಕ ಉಪನಿರೀಕ್ಷಕ ಕೇಶವ್ ಗೌಡ, ಸಿಬ್ಬಂದಿಗಳಾದ ಪ್ರಸನ್ನ, ಜೀವನ್, ರಾಘವೇಂದ್ರ ಮತ್ತು ಜೀಪ್ ಚಾಲಕ ಜೀವನ್ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.