ಕರಾವಳಿ

ಕೊರ್ಗಿ ಗೋ ಕಳ್ಳತನ ಪ್ರಕರಣ; ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ನಿಯೋಗ DYSPಗೆ ಮನವಿ

Pinterest LinkedIn Tumblr

ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಯುವಮೋರ್ಚಾ ವತಿಯಿಂದ ಶುಕ್ರವಾರ ಡಿವೈಎಸ್ಪಿ ಕಛೇರಿಗೆ ತೆರಳಿ ಕುಂದಾಪುರ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಮತ್ತು ಹತ್ಯೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ, ಕೊರ್ಗಿ ಗ್ರಾಮದಲ್ಲಿ ಮೇಯಲು ಬಿಟ್ಟ ಹಾಗೂ ಕೊಟ್ಟಿಗೆಗೆ ನುಗ್ಗಿ ದನಗಳನ್ನು ಕಡಿಯುತ್ತಿರುವ ಗೋ ಕಳ್ಳತನ ನಿರತ ಅಪರಾಧಿಗಳನ್ನು ಶೀಘ್ರವೇ ಬಂಧಿಸುವಂತೆ ಕುಂದಾಪುರ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಜೊತೆಗೂಡಿ ಡಿವೈಎಸ್ಪಿ ಅವರನ್ನು ಆಗ್ರಹಿಸಲಾಯಿತು.

ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ, ಬಿಜೆಪಿ ಮುಖಂಡ ಸಂಪತ್ ಶೆಟ್ಟಿ‌ ಶಾನಾಡಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ , ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಬಿಜೆಪಿ ಪ್ರಮುಖರಾದ ರತ್ನಾಕರ ಕುಂದಾಪುರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಖಾರ್ವಿ, ಚೇತನ್ ಬಂಗೇರ, ಉಪಾಧ್ಯಕ್ಷರಾದ ವಿನಯ್ ಶಿರಿಯಾರ, ಅಭಿಷೇಕ ಅಂಕದಕಟ್ಟೆ, ರಾಘು ಮದ್ದುಗುಡ್ಡೆ, ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಕುಂದಾಪುರ ಸಂತೋಷ್ ಪೂಜಾರಿ, ಅಭಯ್ ದೀಕ್ಷಿತ್, ಸಫಲ್ ಶೆಟ್ಟಿ, ಅರುಣ್ ಕುಮಾರ್ ಹಾಗೂ ಯುವಮೋರ್ಚಾ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.