ಕರಾವಳಿ

ಕೋಟೇಶ್ವರ ಕಟ್ಕರೆಯಲ್ಲಿ ಬಾಲ ಯೇಸುಸುವಿನ ವಾರ್ಷಿಕ ಮಹೋತ್ಸವ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೋತ್ಸವವು ಭಕ್ತಿ ಬಲಿದಾನದ ಮೂಲಕ ನಡೆಯಿತು.

ಕಾರ್ಮೆಲ್ ಯಾಜಕ ಸಂಸ್ಥೆ ಕರ್ನಾಟಕ – ಗೋವಾದ ಪ್ರೋವಿನ್ಸೀಯಲ್ ಅತೀ ವಂ ಫಾ| ಪಿಯುಸ್ ಜೆಮ್ಸ್ ಡಿಸೋಜಾ ಇವರು ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ, ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳಿದರೆ ದೇವರ ಮಕ್ಕಳಾಗುತ್ತೇವೆ’ ಎಂದು ಸಂದೇಶ ಸಾರಿ ’ಯೇಸು ಸ್ವಾಮಿ, ತಮ್ಮ ರಕ್ತ ಸಂಬಂಧದ ಅಣ್ಣ ತಮ್ಮಂದಿರು ತಮ್ಮನ್ನು ಭೇಟಿ ಮಾಡಲು ಬಂದಾಗ, ತಮ್ಮ ಶಿಷ್ಯರನ್ನು ಮತು ಹಿಂಬಾಲಕರನ್ನು ತೋರಿಸಿ ನನ್ನನ್ನು ನನ್ನ ತತ್ವಗಳನ್ನು ಪಾಲಿಸಿ ಅದರಂತೆ ನಡೆಯುವರೇ ನನ್ನ ನಿಜವಾದ ಅಣ್ಣ ತಮ್ಮಂದಿರು, ಸಂಬಂಧಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ. ಆದರೆ ಯೇಸುವಿನ ತತ್ವಗಳನ್ನು ಅಳವಡಿಸಿಕೊಂಡು, ಬಡ ಬಗ್ಗರಿಗೆ ದೀನ ದಲಿತರಿಗೆ, ಕಷ್ಟದಲ್ಲಿರು ಜನರನ್ನು ತಮ್ಮ ಅಣ್ಣ ತಮ್ಮಂದಿರು ಅಂದುಕೊಂಡು ಅಂತವರ ಮೇಲೆ ದಯಾಮಯರಾಗಿ ಅವರ ಸೇವೆ ಮಾಡುತ್ತಾರೊ, ಅವರು ದೇವರ ಮಕ್ಕಳಾಗುತ್ತಾರೆ, ಹಾಗಾಗಿ ನಾವು ಅದೆ ರೀತಿ ಬದುಕಿ ದೇವರ ಮಕ್ಕಳಾಗೋಣ’ ಎಂದು ತಿಳಿಸಿದರು

ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ ೩ ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಂಡಿತ್ತು. ಈ ಧ್ಯಾನ ಕೂಟವನ್ನು ಕಲ್ಮಾಡಿ ಚರ್ಚಿನ ವಂ|ಫಾ|ಆಲ್ಬನ್ ಡಿಸೋಜಾ ಇವರು ನೆಡೆಸಿಕೊಟ್ಟರು. ಮಹಾ ವಾರ್ಷಿಕದ ಈ ಉತ್ಸವದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಉತ್ಸವದ ಕಾರ್ಮೆಲ್ ಸಂಸ್ಥೆಯ ಯಾಜಕರಿಗೆ ಶುಭಾಶಯಗಳನ್ನು ಕೋರಿದರು.

ಕಾರ್ಮೆಲ್ ಸಂಸ್ಥೆಯ ಪ್ರಥಮ ಸಲಹೆಗಾರ ಫಾ|ಜಾರ್ಜ್ ಸಾಂತುಮಾಯೆರ್, ರಿಶಿವನ- ರಾಣಿಪುರ ಇದರ ನಿರ್ದೇಶಕರಾದ ವಂ ಫಾ| ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಅ| ವಂ ಫಾ| ವಿನ್ಸೆಂಟ್ ಸೆರಾವೊ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ವಂ ಫಾ|ದೀಪ್ ಫೆರ್ನಾಂಡಿಸ್, ಕೋಟೆಶ್ವರದ ವಂ|ಫಾ|ಸಿರಿಲ್ ಮಿನೇಜಸ್ ವಂ |ಫಾ|ವಿಜಯ್ ಡಿಸೋಜಾ, ವಂ ಫಾ|ರಾಯನ್ ಪಾಯ್ಸ್, ಇಟಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮೆಲ್ ಸಂಸ್ಥೆಯ ವಂ ಫಾ|ದೊನಾತ್ ರೇಬೆರೊ ಇವರಲ್ಲದೆ ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು ಹಾಗೇ ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಈ ಉತ್ಸವದ ಬಲಿದಾನದಲ್ಲಿ ಭಾಗಿಯಾದರು. ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ರೆಕ್ಟರ್ ಧರ್ಮಗುರು ವಂ|ಒಲ್ವಿನ್ ಸಿಕ್ವೇರ ವಂದಿಸಿದರು.

Comments are closed.