ಕರಾವಳಿ

ಉಡುಪಿಯಲ್ಲಿ ಒಂದೇ ದಿನ ನಾಲ್ಕು ಕಡೆ ಚಿನ್ನಾಭರಣ ಸೆಳೆದು ಪರಾರಿಯಾದ ಖದೀಮರು..!

Pinterest LinkedIn Tumblr

ಉಡುಪಿ: ಉಡುಪಿ ನಗರ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ ಹಾಡು ಹಗಲೇ ಒಟ್ಟು ನಾಲ್ಕು ಕಡೆ ಸರಗಳ್ಳತನ ನಡೆದಿದೆ. ಉಡುಪಿ ಠಾಣಾ ವ್ಯಾಪ್ತಿಯ ಬ್ರಹ್ಮಗಿರಿ ಮತ್ತು ಕಡಿಯಾಳಿ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಂದ್ರ ನಗರ ಮತ್ತು ಕುಂಜಿಬೆಟ್ಟು ಬಳಿ ತಲಾ ಒಂದೊಂದು ಸರಗಳ್ಳತನ ಪ್ರಕರಣ ನಡೆದಿದೆ.

(ಸಾಂದರ್ಭಿಕ ಚಿತ್ರ)

ಬ್ರಹ್ಮಗಿರಿ ಸಾಯಿರಾಧಾ ಫ್ರೈಡ್ ಅಪಾರ್ಟ್ ಮೆಂಟ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯಶೋಧ ಜೆ ಬಂಗೇರಾ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿ ಮಾಂಗಲ್ಯ ಸರದ ಒಂದು ತುಂಡನ್ನು ಎಳೆದು ಪರಾರಿಯಾಗಿದ್ದು. ಅದು ಹತ್ತು ಗ್ರಾಂ ತೂಕದ ಅಂದಾಜು 45 ಸಾವಿರ ಮೌಲ್ಯದ್ಧಾಗಿದೆ.

ಎರಡನೇ ಪ್ರಕರಣದಲ್ಲಿ ಗುಲಾಬಿ ನಾಯ್ಕ್ ಎಂಬವರು ಮನೆಗೆಲಸಕ್ಕೆಂದು ಕಡಿಯಾಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಪರಾರಿಯಾಗಿದ್ದು, ಅದು ಸುಮಾರು ಹನ್ನೆರಡು ಗ್ರಾಂ ತೂಕದ್ದಾಗಿದ್ದು, ಅಂದಾಜು ಮೌಲ್ಯ 50 ಸಾವಿರ ಆಗಿದೆ.

ಚಂದ್ರ ಮೌಳಿ ಪದ್ಮಿನಿ ಎಂಬವರು ಲಕ್ಷ್ಮೀಂದ್ರ ನಗರದಿಂದ ಕಾಮಾಕ್ಷಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಬಲವಂತದಿಂದ ಎಳೆದುಕೊಂಡು ಹೋಗಿದ್ದು ಚಿನ್ನದ ಸರದ ಮೌಲ್ಯ 1 ಲಕ್ಷದ 25 ಸಾವಿರ ಆಗಿದೆ.

ಜಯಂತಿ ಎಂಬವರು ಪೆರಂಪಳ್ಳೀ ಸಂತೋಷ ನಗರದ ಬಸ್ಸು ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಬಲವಂತದಿಂದ ಎಳೆದುಕೊಂಡು ಹೋಗಿದ್ದು, ಚಿನ್ನದ ಸರದ ಮೌಲ್ಯ 50 ಸಾವಿರ ರೂಪಾಯಿ ಆಗಿದೆ.

 

Comments are closed.