ಕುಂದಾಪುರ: ಕುಂದಾಪುರ ಕನ್ನಡ ಪಣ್ಕ್ ಮಕ್ಕಳು ಭಾಗ ಒಂದು ಮತ್ತು ಎರಡರ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ ಅಶೋಕ್ ನೀಲಾವರ (43) ಗೊಕಾಕದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆ ನೀಲಾವರ ನಿವಾಸಿ ಅಶೋಕ್ ನೀಲಾವರ ಬೆಳಗಾವಿ ಗೋಕಾಕಿಗೆ ಬೇಕರಿ ಒಳಾಂಗಣ ವಿನ್ಯಾಸಕ್ಕಾಗಿ ತೆರೆಳಿದ ಸಂದರ್ಭ ಹೃದಯಾಘಾತ ಆಗಿದ್ದು ಪತ್ನಿ ಮತ್ತು ಪುತ್ರಿ ಅಗಲಿದ್ದಾರೆ.
ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡ ಅಶೋಕ್ ಮೃಗಶಿರ, ಕತ್ತಲಕೋಣೆ, ಬೀಟ್ ಚಿತ್ರಗಳ ಒಂದೋಂದು ಹಾಡಿಗೆ ಸಾಹಿತ್ಯ ಬರೆದಿದ್ದರು. ಚಿತ್ರ ಸಾಹಿತಿ ಅಶೋಕ್ ನಿಧನಕ್ಕೆ ನಿರ್ದೇಶಕರಾದ ರವಿ ಬಸ್ರೂರು ಹಾಗೂ ಸಂದೇಶ್ ಶೆಟ್ಟಿ ಆಜ್ರಿ ಸಂತಾಪ ಸೂಚಿಸಿದ್ದಾರೆ.
ಅಶೋಕ್ ಬರೆದ ಬಹಳಷ್ಟು ಕುಂದಾಪುರ ಕನ್ನಡ ಗೀತೆಗಳು ಜನಪ್ರಿಯವಾಗಿತ್ತು.