ಉಡುಪಿ: ಜಿಲ್ಲೆಯ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಬೈಕ್ ಸೇಲ್ಸ್ ಅಂಗಡಿಯಿಂದ ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಗೆ ತೆಗೆದುಕೊಂಡು ಹೋದ ಬೈಕಿನೊಂದಿಗೆ ಪರಾರಿಯಾದ ಘಟನೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಹೆರ್ಗ ನಿವಾಸಿ ಪ್ರಶಾಂತ್ ಕುಮಾರ್ ಎಂಬವರು ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮತ್ತು ಖರೀದಿ ವ್ಯಾಪಾರ ನಡೆಸುತ್ತಿದ್ದು ನ್ಯೂ ಮಣಿಪಾಲ ಬಜಾರ್ ಶಾಪ್ ಗೆ ಗಣೇಶ್ ಉದ್ಯಾವರ ಎಂದು ಹೆಸರು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಬೈಕ್ ಬೇಕೆಂದು ಕೇಳಿದ್ದು ಅಂಗಡಿ ಮಾಲೀಕರು ನಾಸಿರ್ ಹುಸೈನ್ ಅವರು ಮಾರಾಟಕ್ಕೆ ಇಟ್ಟಿದ್ದ ಕೆಎ-19 ಇಯು 6827 ನಂಬರಿನ ಟಿವಿಎಸ್ ಬೈಕ್ ನ್ನು ಟೆಸ್ಟ್ ರೈಡ್ ಗೆ ಪಡೆದು ನಂತರ ಬೈಕ್ ಚಾಲನೆ ಮಾಡಿಕೊಂಡು ಹೋದ ವ್ಯಕ್ತಿ ಹಿಂತಿರುಗಿ ಬರಲಿಲ್ಲ.
ಅಂಗಡಿ ಮಾಲೀಕ ಪ್ರಶಾಂತ್ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.