ಕರಾವಳಿ

ಕೆಜಿಎಫ್​ ಚಾಪ್ಟರ್- 2 ಚಿತ್ರೀಕರಣಕ್ಕೆ ಕರಾವಳಿಗೆ ಬಂದಿದ್ದಾರೆ ‘ರಾಕಿ ಬಾಯ್’ ಯಶ್!

Pinterest LinkedIn Tumblr

ಉಡುಪಿ: ಕೆ.ಜಿ.ಎಫ್.. ಸಿನೆಮಾ ಇಂಡಸ್ಟ್ರಿಯಲ್ಲೇ ಸದ್ದು ಮಾಡಿದ ಸಿನೆಮಾವಿದು. ಕೆಜಿಎಫ್​ ಚಾಪ್ಟರ್​ 2- ಸದ್ಯ ಬಹುನಿರೀಕ್ಷಿತ ಸಿನಿಮಾ. ಲಾಕ್​ಡೌನ್​ನಿಂದಾಗಿ ಕೆಜಿಎಫ್​ ಶೂಟಿಂಗ್​ ಬರೋಬ್ಬರಿ ಆರೇಳು ತಿಂಗಳು ಸ್ಥಗಿತಗೊಂಡಿತ್ತು. ಅನ್ ಲಾಕ್ ಪ್ರಕ್ರಿಯೆ ಬಳಿಕ ಕೋವಿಡ್ ನಿಯಮಾವಳಿಯಂತೆ ಕೆಲ ದಿನದ ಹಿಂದೆ ಚಿತ್ರತಂಡ ಮತ್ತೆ ಶೂಟಿಂಗ್​ ಆರಂಭಿಸಿದ್ದು ಸದ್ಯ, ರಾಕಿಂಗ್ ಸ್ಟಾರ್​ ಯಶ್​ ಹಾಗೂ ನಾಯಕಿ ಶ್ರೀನಿಧಿ ಶೆಟ್ಟಿ ಉಡುಪಿಯ ಮಲ್ಪೆ ಬೀಚ್​ ಸಮೀಪದ ಪಡುಕೆರೆ ಬೀಚ್​ನಲ್ಲಿ ಶೂಟಿಂಗ್​ ಆರಂಭಿಸಿದ್ದಾರೆ.

ಹಲವು ತಿಂಗಳ ಬ್ರೇಕ್ ಬಳಿಕ ಶೂಟಿಂಗ್​ಗೆ ಬಂದಿರೋ ಖುಷಿಯನ್ನು ರಾಕಿಂಗ್ ಸ್ಟಾರ್​ ಯಶ್ ತಮ್ಮ ಫೇಸ್ಬುಕ್, ಇನ್ಸ್​ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ‘ಅಲೆಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ನೀವು ನಾವಿಕನಾಗಲು ಕಲಿಯಬಹುದು ..ಸುದೀರ್ಘ ವಿರಾಮದ ನಂತರ….ರಾಕಿ ಸೆಟ್‌ಗಳು ಇಂದಿನಿಂದ ಪಯಣಿಸುತ್ತವೆ’ ಎಂದು ಬರೆದಿದ್ದಾರೆ.

ಈಗಾಗಲೇ ಚಿತ್ರೀಕರಣ ಆರಂಭಿಸಿರುವ ತಂಡ ತಿಂಗಳಲ್ಲೇ ಕೆಜಿಎಫ್ ಶೂಟಿಂಗ್​​ ಮುಗಿಸಲು ಪ್ಲಾನ್​ ಮಾಡಿಕೊಂಡಿದೆ. ಇನ್ನು ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಸಂಜಯ್ ದತ್ ಡೇಟ್ ಕೂಡ ಫಿಕ್ಸ್ ಆಗಿದೆ ಎನ್ನಲಾಗಿದ್ದು ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಅವರು ನಾಲ್ಕು ದಿನದ ಡೇಟ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

Comments are closed.