ಕರಾವಳಿ

ಬೈಂದೂರು ಬಾಲಕೃಷ್ಣ ಎಸ್. ಮದ್ದೋಡಿಯವರಿಗೆ ಪಿ‌ಎಚ್‌ಡಿ ಪದವಿ

Pinterest LinkedIn Tumblr

ಉಡುಪಿ: ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್’ (MAHE) ಯವರು ಬಾಲಕೃಷ್ಣ ಎಸ್ ಮದ್ದೋಡಿ ಅವರ ಮಂಡಿಸಿದ ಸಂಶೋಧನೆ “ಭಾರತದ ದಕ್ಷಿಣ ಪಶ್ಚಿಮ ಕರಾವಳಿಯ ಉದ್ಯಾವರ ನದಿ ಜಲಾನಯನ ಪ್ರದೇಶದ ಭೂ-ಮಾಹಿತಿ ಮತ್ತು ಭೂ ಮೌಲ್ಯಮಾಪನ ಅಧ್ಯಯನಗಳು”
ಪ್ರಬಂಧ ಪಿ‌ಎಚ್‌ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ಪ್ರಾಧ್ಯಾಪಕ, ಭೂ ವಿಜ್ಞಾನ ಡಾ.ಎಚ್.ಎನ್ ಉದಯಶಂಕರ ಅವರ ಮಾರ್ಗದರ್ಶನದಡಿಯಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಅವರು ರಾಮಾಕ್ಷತ್ರಿಯ ಮುಖಂಡ ಬೈಂದೂರು ನಿವಾಸಿ ಮದ್ದೋಡಿ ಮನೆ ಶ್ರೀನಿವಾಸ್ ರಾಮಕೃಷ್ಣ ಮದ್ದೋಡಿ ಮತ್ತು ಲೀಲಾವತಿ ಮದ್ದೋಡಿ ಅವರ ಪುತ್ರ ಹಾಗು ಮಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

Comments are closed.