ಕರಾವಳಿ

ಭಾರತದ ಅರ್ಥವ್ಯವಸ್ಥೆ ಚೇತರಿಸಲಿದೆ : ಡಾ. ಸುಧಾಕರ್ ಜಂಬಗಿ 

Pinterest LinkedIn Tumblr

ಮಂಗಳೂರು : ಭಾರತದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲು ನೆರೆಯ ರಾಷ್ಟ್ರಗಳು ಕೋವಿಡ್ -19 ವೈರಸ್ ಮೂಲಕ ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಭಾರತಕ್ಕೆ ಅದನ್ನು ಎದುರಿಸುವ ಶಕ್ತಿ ಇದೆ ಎಂದು ಎನ್ ಐಟಿಕೆ ಸುರತ್ಕಲ್ ಇಲ್ಲಿನ ಪ್ರೊಫೆಸರ್ ಡಾ.ಸುಧಾಕರ್ ಜಂಬಗಿಯವರು ಅಭಿಪ್ರಾಯಪಟ್ಟರು.

ಅವರು ಶ್ರೀನಿವಾಸ ನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ(ರಿ), ಪದವು, ಬಿಕರ್ನಕಟ್ಟೆ ಇಲ್ಲಿ ನಡೆದ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾವರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಸವಾಲುಗಳನ್ನು ಎದುರಿಸುತ್ತಾ, ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಬದುಕನ್ನು ಹೊಂದಿಸಿಕೊಂಡು, ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳಿದರೆ ಭಾರತೀಯರು ಆತ್ಮನಿರ್ಭರ ಭಾರತವನ್ನು ಕಟ್ಟಲು ಸಾಧ್ಯವೆಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕಾರ್ಪೊರೇಟರ್ ಶ್ರೀಮತಿ ವನಿತಾ ಪ್ರಸಾದ್ ರವರು SSLC, PUC, ಪದವಿ ಮತ್ತು ಸ್ನಾತಕೋತ್ತರ ಪದವಿ(PG) ಯಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ ಸಾಧಕರನ್ನು ಸಂಘದ ವತಿಯಿಂದ ಗೌರವಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ವಾಮನ್ ಬಿ ಮೈಂದನ್ ರವರು ಸ್ವಾಗತಿಸಿ ಕಾರ್ಯದರ್ಶಿ ಶ್ರೀ ಓಸ್ಮಾoಡ್ ಫೆರ್ನಾಂಡಿಸ್ ವಂದಿಸಿದರು. ಶ್ರೀ ನವೀನ್ ಐಲ್ ಕಾರ್ಯಕ್ರಮ ನಿರೂಪಿಸಿದರು.

Comments are closed.