
ಮಂಗಳೂರು ಆಗಸ್ಟ್ 18 : ಮಂಗಳೂರಿನಲ್ಲಿ ಆಸ್ಪತ್ರೆಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ಣಿಮಾ (35) ಎಂಬ ಯುವತಿ ಆಗಸ್ಟ್ 13ರಂದು ಪಂಪ್‍ವೆಲ್ ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆಂದು ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಪೂರ್ಣಿಮಾ, ಪ್ರಾಯ – 35 ವರ್ಷ, ಎತ್ತರ-5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಎದುರಿನ ಹಲ್ಲು ಹೊರಬಂದಂತೆ ಕಾಣುತ್ತದೆ. ಧರಸಿದ ಬಟ್ಟೆ-ನೀಲಿ ಬಣ್ಣದ ಟಾಪ್ ಹಾಗೂ ಜೀನ್ಸ್ ಪ್ಯಾಂಟ್ ಶರ್ಟ್, ಮಾತನಾಡುವ ಭಾಷೆ- ಕನ್ನಡ, ತುಳು.
ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ಉಪನಿರೀಕ್ಷಕರು, ಕಂಕನಾಡಿ ನಗರ ಠಾಣೆ, ಮಂಗಳೂರು ದೂರವಾಣಿ ಸಂಖ್ಯೆ 0824 2220529, 9480805354, 0824 2220800 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Comments are closed.