ಕುಂದಾಪುರ: ಭಾನುವಾರ ಬೈಂದೂರು ತಾಲೂಕಿನ ಕೊಡೇರಿ ಬಂದರು ಸಮೀಪ ನಡೆದ ದೋಣಿ ದುರಂತದಲ್ಲಿ ಮೃತರಾದ ನಾಲ್ವರು ಮೀನುಗಾರರ ಕುಟುಂಬಕ್ಕೆ ಧೈರ್ಯದ ಜೊತೆ ಸಾಂತ್ವಾನವನ್ನು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಹೇಳಿದ್ದಾರೆ.
ಮೀನುಗಾರರು ನನ್ನ ಪ್ರಿಯ ಶಿಷ್ಯರು, ಒಳ್ಳೆಯ ಭಕ್ತರು. ದುರ್ಘಟನೆಯಲ್ಲಿ ಮೃತರಾದ ನಾಲ್ವರು ಪುಣ್ಯಜೀವಿಗಳಿಗೆ ಸದ್ಗತಿ, ಚಿರಶಾಂತಿ ಲಭಿಸಲಿ. ಮೀನುಗಾರರ ಕುಟುಂಬದ ಜೊತೆ ಗುರು ಪೀಠವಿದೆ, ಸಮಾಜವಿದೆ ಎಂದು ಹೇಳಿದ ಅವರು ದಿನದ ದುಡಿಮೆಯನ್ನು ನಂಬಿ ಬದುಕುವ ಮೀನುಗಾರರು ಅಗರ್ಭ ಶ್ರೀಮಂತರಲ್ಲ. ಹಾಗಾಗಿ ಮೀನುಗಾರ ಕುಟುಂಬಕ್ಕೆ ಸರಕಾರ ಯೋಗ್ಯ ಪರಿಹಾರ ನೀಡಬೇಕು ಎಂದರು.
ಸಮುದ್ರ ಪ್ರಕ್ಷುಬ್ಧವಾಗಿರುವ ವೇಳೆ ಮೀನುಗಾರರು ಜಾಗೃತೆ ವಹಿಸಿ ಎಂದು ಮೀನುಗಾರರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
Comments are closed.