ಕರಾವಳಿ

ಮಂಗಳೂರಿನಲ್ಲಿ ಅಕ್ರಮ ಜೂಜಾಟ ಕಂಡು ಬಂದರೆ ನಮಗೆ ಕರೆ ಮಾಡಿ : ಪೊಲೀಸ್ ಕಮಿಷನರ್

Pinterest LinkedIn Tumblr

 

ಮಂಗಳೂರು ಆಗಸ್ಟ್ 18 : ಮಂಗಳೂರು ನಗರದಲ್ಲಿ ಯಾವುದೇ ರೀತಿಯ ಅಕ್ರಮ ಜೂಜಾಟ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅಕ್ರಮ ಚಟುವಟಿಕೆ ಗಳನ್ನು ನಡೆಸುವವರ ಬಗೆಗಿನ ಮಾಹಿತಿಯನ್ನು ಈ ಕೆಳಗೆ ತಿಳಿಸಿರುವ ಪೊಲೀಸ್ ಅಧಿಕಾರಿಗಳಿಗೆ ನೀಡುವಂತೆ ಮಂಗಳೂರು ಪೋಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಡಿಸಿಪಿ ಅರುಣಾಂಗ್ಷುಗಿರಿ – ಮೊಬೈಲ್ ಸಂಖ್ಯೆ 9480802304, ಅಪರಾಧ ಮತ್ತು ಸಂಚಾರ ಡಿ.ಸಿ.ಪಿ ವಿನಯ್ ಗಾಂವ್‍ಕರ್ – ಮೊಬೈಲ್ ಸಂಖ್ಯೆ 9480802305 ಮತ್ತು ನಗರ ಪೊಲೀಸ್ ಕಂಟ್ರೋಲ್ ರೂಂ – ಮೊಬೈಲ್ ಸಂಖ್ಯೆ 9480802321, ದೂರವಾಣಿ ಸಂಖ್ಯೆ –0824 2220800 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮಂಗಳೂರು ಪೋಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.