ಉಡುಪಿ: ಜಿಲ್ಲೆಯ ಹೆಜಮಾಡಿ ಡಾಬಾವೊಂದರ ಕಟ್ಟಡ ಮಾಲೀಕ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೂಲತಃ ಮಂಗಳೂರಿನವರಾದ ದಿನೇಶ್ ಶೆಟ್ಟಿ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಭಾನುವಾರ ತಡರಾತ್ರಿ ಹೆಜಮಾಡಿಯ ಅವರ ಕೊಠಡಿಗೆ ಹೋಗಿದ್ದ ಇವರು ಯಾವುದೋ ವಿಚಾರದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತನ್ನ ಸ್ನೇಹಿತರಿಗೆ ಸೋಮವಾರ ತನ್ನ ಮನೆಗೆ ಬರಲು ದಿನೇಶ್ ಹೇಳಿದ್ದು ಇಂದು ಸ್ನೇಹಿತರು ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ
Comments are closed.