ಕರಾವಳಿ

ಮಾರಣಕಟ್ಟೆಯಲ್ಲಿ ಗೋಕಳ್ಳರ ಅಟ್ಟಹಾಸ: ದಲ್ಲಾಳಿ ಅರೆಸ್ಟ್-ಗೋಕಳ್ಳರಿಬ್ಬರು ಪರಾರಿ, ಇನ್ನೋವಾ ವಶ..!

Pinterest LinkedIn Tumblr

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾರಣಕಟ್ಟೆ ಸಮೀಪ ಮನೆಯೊಂದರ ಹಟ್ಟಿಗೆ ಬುಧವಾರ ಮುಂಜಾನೆ ನುಗ್ಗಿದ ದನಗಳ್ಳರು ಮನೆಯವರು ಮಲಗಿದ್ದ ವೇಳೆ ಹೊಂಚು ಹಾಕಿ ಎರಡು ಹಸು ಕಳವು ಮಾಡಿ ಸಾಗಾಟ ಮಾಡಲು ಯತ್ನಿಸಿದ್ದು ಸ್ಕೂಟರಿನಲ್ಲಿ ಎಸ್ಕಾರ್ಟ್ ಮಾಡುತ್ತಿದ್ದ ದಲ್ಲಾಳಿಯಾದ ಉನ್ನಿ ಮೋಯಿನ್ ಎಂಬಾತನನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರ ಸಹಕಾರದಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಇದೇ ವೇಳೆ ಇಬ್ಬರು ಗೋಕಳ್ಳರು ಇನ್ನೋವಾ ಕಾರು ಸಮೇತ ಪರಾರಿಯಾಗಲು ಯತ್ನಿಸಿದ್ದು ಸಂಘಟನೆ ಕಾರ್ಯಕರ್ತರನ್ನು ಕಂಡು ಬೆದರಿ ಕಾರು ಹಾಗೂ ಕಾರಿನಲ್ಲಿದ್ದ ಎರಡು ಜಾನುವಾರು ಬಿಟ್ಟು ಪರಾರಿಯಾಗಿದ್ದಾರೆ. ಮಂಗಳೂರು ನೋಂದಣಿಯ ಕಾರು ಇದಾಗಿದೆ.

ಮುಂಜಾನೆ ಹಟ್ಟಿಗೆ ನುಗ್ಗಿದ ಕಳ್ಳರ ನೋಡಿದ ನಾಯಿಗಳು ಬೊಬ್ಬೆ ಹಾಕಿದ್ದರಿಂದ ಮನೆಯವರು ಎಚ್ಚರಗೊಂಡು ಹಟ್ಟಿಯಲ್ಲಿ ಹಸುಗಳ ಕಳವು ಮಾಡುತ್ತಿರುವುದು ತಡೆಯುವ ಪ್ರಯತ್ನ ಮಾಡಿದ್ದಾರೆ. ಗೋಕಳ್ಳರು ಮನೆಯವರಿಗೆ ಮಾರಕಾಯುಧ ತೋರಿಸಿ ಧಮ್ಕಿ ಹಾಕಿ, ಹಟ್ಟಿಯಲ್ಲಿದ್ದ ಹಸುಗಳ ಇನೋವಾ ಕಾರ್‌ಗೆ ತುಂಬಿದ್ದಾರೆ.ಹಸುವು ಕಳವು ಮಾಡುತ್ತಿರುವ ಸುದ್ದಿ ಪರಿಸರದ ಜನರಿಗೆ ತಿಳಿದು ಹಿಂದೂ ಪರ ಸಂಘಟನೆಗೆ ಸದಸ್ಯರಿಗೆ ಮಾಹಿತಿ ನೀಡಿದ್ದು, ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದಿದ್ದಾರೆ.

ಕೊಲ್ಲೂರು ಠಾಣೆ ಪಿಎಸ್ಐ ಮಹಾದೇವ ಬೋಸ್ಲೆ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.