ಕರಾವಳಿ

ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ 2 ಬೋಟುಗಳ ನಾಲ್ಕು ಬ್ಯಾಟರಿಗಳನ್ನು ಕದ್ದ ಕಳ್ಳರು!

Pinterest LinkedIn Tumblr

ಉಡುಪಿ: ಮಳೆಗಾಲದ ಹಿನ್ನೆಲೆ ಮೀನುಗಾರಿಕೆಗೆ ನಿಷೇಧವಿರುವ ಕಾರಣ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ಬ್ಯಾಟರಿಗಳನ್ನು ಕಳ್ಳರು ಕದ್ದಿದ್ದಾರೆ.

(ಸಾಂದರ್ಭಿಕ ಚಿತ್ರ)

ಉಡುಪಿ ಪಡುತೋನ್ಸೆ ಬೇಂಗ್ರೆಯ ಧರ್ಮರಾಜ್ ಸುವರ್ಣ ಎನ್ನುವರು ತಿರುಮಲ-1 ಹೆಸರಿನ ಪರ್ಶೀನ್ ಮೀನುಗಾರಿಕಾ ಬೋಟನ್ನು ಹೊಂದಿದ್ದು, ಮೇ ತಿಂಗಳಲ್ಲಿ ಮೀನುಗಾರಿಕೆ ನಡೆಸಿ ಮಲ್ಪೆ ಬಂದರಿನ ಪಡುದಕ್ಕೆಯ ಮೂರನೇ “T” ದಕ್ಕೆಯಲ್ಲಿ ಬೋಟನ್ನು ಕಟ್ಟಿದ್ದು, ಪ್ರತಿ ದಿನ ಬೋಟಿನ ಬಳಿಗೆ ಹೋಗಿ ಬರುತ್ತಿದ್ದರು. ಎಂದಿನಂತೆ ಬೋಟಿನ ನೀರು ಖಾಲಿ ಮಾಡಲು ಬೋಟ್ ಇಂಜಿನ್ ಸ್ಟಾರ್ಟ್‌ ಮಾಡಿದಾಗ ಸ್ಟಾರ್ಟ್‌ ಆಗದಿದ್ದು ಬೋಟಿನೊಳಗೆ ಪರಿಶೀಲಿಸಿದಾಗ ಬೋಟಿನ ಕ್ಯಾಬಿನ್ ಒಳಗಡೆ ಇರಿಸಿದ್ದ ಎರಡು ಬ್ಯಾಟರಿಗಳು (Power Poin Battery No.832-833) ಕಾಣದೆ ಇದ್ದು, ಬ್ಯಾಟರಿ ಅಳವಡಿಸಿದ ಕೇಬಲ್ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಯಾರೋ ಕಳ್ಳರು ತಿರುಮಲ-1 ಬೋಟಿನ ಎರಡು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದ ಎರಡು ಬ್ಯಾಟರಿಗಳ ಮೌಲ್ಯ ರೂಪಾಯಿ. 22ಸಾವಿರ ಆಗಿದೆ.

(ಮಲ್ಪೆ ಬಂದರು- ಸಂಗ್ರಹ ಚಿತ್ರ)

ಉಡುಪಿ ಕೊಡವೂರಿನ ದಯೇಂದ್ರ ಜಿ ಬಂಗೇರ ಅವರು ನಡೆಸುತ್ತಿದ್ದ ಜೈ ಹನುಮ ಹೆಸರಿನ ಬೋಟನ್ನು ಮಾರ್ಚ್‌ ತಿಂಗಳಲ್ಲಿ ಮೀನುಗಾರಿಕೆ ನಡೆಸಿ ಬಳಿಕ ಬಾಪು ತೋಟದ ಹೊಸ ಕಛೇರಿಯ “T” ಯಲ್ಲಿ ಬೋಟನ್ನು ಕಟ್ಟಿದ್ದು ಆ ಬೋಟಿನೊಳಗಿದ್ದ ಎರಡು ಬ್ಯಾಟರಿಗಳನ್ನು ಕದ್ದಿದ್ದಾರೆ. ಕಳವಾದ ಬ್ಯಾಟರಿಗಳ ಮೌಲ್ಯ 24 ಸಾವಿರ ಆಗಿದೆ.

ಈ ಎರಡು ಕಳವು ಘಟನೆಯ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರತೇಕ ಪ್ರಕರಣಗಳು ದಾಖಲಾಗಿದೆ.

Comments are closed.