ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪೂಜ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸಂಸ್ಮರಣಾರ್ಥ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜುಪ್ರಾಸಾದ’ದ ವಾದಿರಾಜ ಮಂಟಪದಲ್ಲಿ ಜರಗುತ್ತಿರುವ ಸಾಮವೇದ ಸಂಹಿತಾಯಾಗದ ಸಂದರ್ಭ ಅಷ್ಟಾವಧಾನ ಸಾಹಿತ್ಯ ಸೇವೆ ನಡೆಸಲಾಯಿತು.
ಪುರಾಣದ ಬಗ್ಗೆ ಪೊಳಲಿ ನಿತ್ಯಾನಂದ ಕಾರಂತ, ಶಾಸ್ತ್ರದ ವಿಚಾರವಾಗಿ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ಸಂಗೀತ ವಾದನದಲ್ಲಿ ಆಕಾಶವಾಣಿ ಕಲಾವಿದ ವಿದ್ವಾನ್ ಕೃಷ್ಣ ಪವನ್ ಕುಮಾರ್, ಶಾಸ್ತ್ರೀಯ ಸಂಗೀತದಲ್ಲಿ ಕು| ಚೈತ್ರಾ ಅಡಿಗ ಕದ್ರಿ ಹಾಗೂ ಕು| ವರ್ಷಾ ಅಡಿಗ ಕದ್ರಿ, ವೀಣೆಯಲ್ಲಿ ಶ್ರೀಮತಿ ವಿನೋದ ಪಿ. ಕಲ್ಕೂರ , ಹಾರ್ಮೋನಿಯಂನಲ್ಲಿ ಲಕ್ಷ್ಮೀ ನಾರಾಯಣ ಕಲ್ಕೂರ ಮೊದಲಾದವರು ಅಷ್ಟಾವಧಾನ ಸಾಹಿತ್ಯ ಸೇವೆ ನಡೆಸಿಕೊಟ್ಟರು.
ನೀಲಾವರ ಕೆಳಕುಂಜಾಲು ನಾಗರಾಜ ಮಕ್ಕಿತ್ತಾಯ ಅವರು ಪ್ರಧಾನ ಅಧ್ವರ್ಯುವಾಗಿ ಯಾಗ ಕಾರ್ಯವನ್ನು ನಡೆಸುತ್ತಿರುವುದಾಗಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
Comments are closed.