ಕರಾವಳಿ

ಉಡುಪಿಯ ಅಭಿಜ್ಞಾ ರಾವ್ 2nd ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

Pinterest LinkedIn Tumblr

ಉಡುಪಿ: ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ರಾವ್ 596 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​ ಆಗಿದ್ದಾರೆ.

ಸಂಸ್ಕೃತ ಭಾಷೆಯಲ್ಲಿ 100 ಅಂಕ, ಭೌತ ಶಾಸ್ತ್ರ-100 ಅಂಕ,ರಸಾಯನ ಶಾಸ್ತ್ರ 100 ಅಂಕ, ಗಣಿತ ಶಾಸ್ತ್ರ 100 ಅಂಕ,ಕಂಪ್ಯೂಟರ್ ವಿಜ್ಞಾನದಲ್ಲಿ 100 ಅಂಕ,ಇಂಗ್ಲೀಷ್ ಭಾಷೆಯಲ್ಲಿ 96 ಅಂಕ ಪಡೆದು ಒಟ್ಟು 596 ಅಂಕ ಪಡೆಯುವ ಮೂಲಕ ವಿದ್ಯಾರ್ಥಿನಿ ಅಮೋಘ ಸಾಧನೆ ಮಾಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ಅಭಿಜ್ಞಾ ಇದೀಗ ಪಿಯುಸಿಯಲ್ಲಿಯೂ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

Comments are closed.