ಕರಾವಳಿ

‘ಕೊಟ್ಟ ಕೆಲಸಕ್ಕೆ ತಕ್ಕ ವೇತನ ನೀಡಿ’- ರಾಜ್ಯಾದ್ಯಂತ ಆಶಾ ಕಾರ್ಯಕರ್ತರ ಅನಿರ್ದಿಷ್ಟಾವಧಿ‌ ಧರಣಿ

Pinterest LinkedIn Tumblr

ಕುಂದಾಪುರ: ಕೊವೀಡ್ 19 ಪ್ರಾರಂಭದಿಂದಲೂ ಹಗಲು ರಾತ್ರಿಯೆನ್ನದೆ ವಿವಿಧ ರಾಜ್ಯಗಳಿಂದ ಊರಿಗೆ ಬಂದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುದರಿಂದ ಹಿಡಿದು ಅವರ ಕ್ವಾರಂಟೈನ್ ಮೊದಲಾದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿ ಕೊರೋನಾ‌ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ‌ಕಾರ್ಯಕರ್ತೆಯರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ‌ ಇಂದಿನಿಂದ ತಮ್ಮ ಕೆಲಸವನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಲಿದ್ದಾರೆ.

ಕೊಟ್ಟ ಕೆಲಸಕ್ಕೆ ಸರಿಯಾದ ರೀತಿ ವೇತನಕ್ಕಾಗಿ ಸರಕಾರಕ್ಕೆ ಈ ಹಿಂದಿನಿಂದಲು ಸಾಕಷ್ಟು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರೂ ಯಾವುದೇ ರೀತಿಯಲ್ಲಿ ಪ್ರಯೋಜನ ಬಾರದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಆಶಾ ‌ಕಾರ್ಯಕರ್ತರ ಪ್ರಮುಖ ಬೇಡಿಕೆಗಳಾದ ಮಾಸಿಕ ಕನಿಷ್ಟ 12 ಸಾವಿರ ಗೌರವಧನ ನಿಗದಿ ಮಾಡಬೇಕು ಹಾಗೂ ಅಗತ್ಯ ಸುರಕ್ಷತಾ ಸಾಮಾಗ್ರಿ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಕರ್ನಾಟಕ ರಾಜ್ಯವ್ಯಾಪಿ ತಮ್ಮ ಕೆಲಸ ಸ್ಥಗಿತಗೋಳಿಸಿ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅನಿರ್ದಿಷ್ಟವದಿ ಪ್ರತಿಭಟನೆ ನಡೆಯುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸುವ ಮುಲಕ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.

Comments are closed.