ಕರಾವಳಿ

ಬಿ.ಐ.ಆರ್.ಡಿ ಜಂಟಿ ನಿರ್ದೇಶಕರಾಗಿ ಅರುಣ್ ಎಂ ತಲ್ಲೂರು ನೇಮಕ

Pinterest LinkedIn Tumblr

ಮಂಗಳೂರು ಜುಲೈ 07: ಮಂಗಳೂರಿನ ಬ್ಯಾಂಕರ್ಸ್ ಇನ್ಸಿಟ್ಯೂಟ್ ಆಫ್ ರೂರಲ್ ಡೆವಲಪ್‍ಮೆಂಟ್ (ಬಿಐಆರ್‍ಡಿ)ನ ಜಂಟಿ ನಿರ್ದೇಶಕರಾಗಿ ):- ನಬಾರ್ಡ್‍ನ ಜನರಲ್ ಮ್ಯಾನೇಜರ್ ಅರುಣ್ ಎಂ ತಲ್ಲೂರು ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ನಬಾರ್ಡ್ ವಿವಿಧ ಆಡಳಿತ ವಿಭಾಗಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿರುವ ಅರುಣ್ ತಲ್ಲೂರು, ನವದೆಹಲಿ ನ್ಯಾಬ್ಕೋನ್ಸ್ ಇದರ ಉಪಾಧ್ಯಕ್ಷರಾಗಿದ್ದಾರೆ.

ಬಿಐಆರ್‍ಡಿ ಮಂಗಳೂರು ಘಟಕವು ನಬಾರ್ಡ್ ಪ್ರಾಯೋಜಿತ ಸಂಸ್ಥೆಯಾಗಿದ್ದು, ಗ್ರಾಮೀಣ ಹಣಕಾಸು ಸಂಸ್ಥೆಗಳನ್ನು ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸಿ, ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಒತ್ತುಕೊಡುತ್ತದೆ.

ಮಂಗಳೂರಿನ ನಗರದ ಬೊಂದೆಲ್‍ನಲ್ಲಿ ಕಾರ್ಯಾಚರಿಸುತ್ತಿರುವ ಬಿಐಆರ್‍ಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ತರಬೇತಿಗಳನ್ನು ನಡೆಸುತ್ತಿದೆ. 2019-20ರಲ್ಲಿ ಈ ಸಂಸ್ತೆಯಲ್ಲಿ ಸುಮಾರು 130 ತರಬೇತಿ ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.