ಕರಾವಳಿ

ಲಾಕ್ ಡೌನ್ ಸಂಧರ್ಭ ಕೇಂದ್ರ ಸರಕಾರದ ವೈಫಲ್ಯ ಹಾಗೂ ದ.ಕ.ಜಿಲ್ಲಾಡಳಿತದ ಬೇಜವಾಬ್ದಾರಿತನ ಖಂಡನೀಯ : ಸಿಪಿಐಎಂ

Pinterest LinkedIn Tumblr

ಮಂಗಳೂರು : ಬೀಡಿ ಕಾರ್ಮಿಕರಿಗೆ, ಬಿಸಿಯೂಟ ನೌಕರರಿಗೆ, ಖಾಸಗೀ ಶಾಲಾ ಶಿಕ್ಷಕರಿಗೆ, ಬಸ್ ನೌಕರರಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಪರಿಹಾರ ನಿಧಿ ಒದಗಿಸುವಂತೆ ಒತ್ತಾಯಿಸಿ ಸಿಪಿಐಎಂ ನೇತೃತ್ವದಲ್ಲಿ ಜೂನ್ 28ರಿಂದ ಜುಲೈ 5ರವರೆಗೆ ದ.ಕ.ಜಿಲ್ಲೆಯಾದ್ಯಂತ ವಾರಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಬೋಳಾರದಲ್ಲಿ ಬಿತ್ತಿಚಿತ್ರ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸಲಾಯಿತು.

ಲಾಕ್ ಡೌನ್ ಸಂಧರ್ಭದಲ್ಲಿ ಜನತೆಯ ಕಾಳಾಜಿ ವಹಿಸುವಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸೇರಿದಂತೆ ಇನ್ನೂ ಹಲವಾರು ವಿಚಾರಗಳಲ್ಲಿ ಕೇಂದ್ರ ಸರಕಾರ ಸಂಪೂರ್ಣ ವೈಫಲ್ಯವಾಗಿದೆ. ಮಾತ್ರವಲ್ಲದೇ ದ.ಕ.ಜಿಲ್ಲಾಡಳಿತವು ಲಾಕ್ ಡೌನ್ ಸಂದರ್ಭ ತನ್ನ ಬೇಜವಾಬ್ದಾರಿ ವರ್ತನೆ ಮೂಲಕ ಸಾರ್ವಜನಿಕರು ಹತ್ತು ಹಲವಾರು ಸಮಸ್ಯೆಗಳಿಂದ ಪರಾದಾಡುವಂತೆ ಮಾಡಿದೆ. ಕೇಂದ್ರ ಸರಕಾರದ ವೈಫಲ್ಯ ಹಾಗೂ ದ.ಕ.ಜಿಲ್ಲಾಡಳಿತದ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸುವುದಾಗಿ ಪ್ರತಿಭಟನ ನಿರತರು ಆಕ್ರೋಷ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿ, ಸಿಪಿಐಎಂ ಜಿಲ್ಲಾ ಯುವ ನಾಯಕರಾದ ಸಂತೋಷ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ,ಎಸ್ ಎಫ್ ಐ ಜಿಲ್ಲಾಧ್ಯಕ್ಷರಾದ ಮಾಧುರಿ ಬೋಳಾರ, ಸಿಪಿಐಎಂ ಬೋಳಾರ ಶಾಖಾ ಕಾರ್ಯದರ್ಶಿ ನಾಗೇಶ್ ಕೋಟ್ಯಾನ್, ಇತರ ಪಕ್ಷದ ನಾಯಕರಾದ ಜಯರಾಮ ಮಣಿಯಾಣಿ, ಜೆಸಿಂತ ಡಿಸೋಜ, ಸುಕನ್ಯಾ ಮುಂತಾದವರು ಉಪಸ್ಥಿತರಿದ್ದರು.*

Comments are closed.