ಮಂಗಳೂರು : ಪ್ರತಿಯೋರ್ವ ವ್ಯಕ್ತಿಯೂ ಮುಖ ಕವಚವನ್ನು (ಮಾಸ್ಕನ್ನು) ಧರಿಸುವುದರ ಮುಖೇನ ಕೊರೋನಾ ವಿಮೋಚನ ಜಾಗೃತಿ ಸಮರದಲ್ಲಿ ಸಹಭಾಗಿಗಳಾಗೋಣ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಮಾಸ್ಕ್ ದಿನದ ಆಚರಣೆಯನ್ನು ಉದ್ದೇಶಿಸಿ ಮಾತಾನಾಡಿದ ಕಲ್ಕೂರರು ಕನ್ನಡ (ಕ) ಮುದ್ರಿತ ಮಾಸ್ಕನ್ನು ವಿತರಿಸಿ ಸಂದೇಶ ನೀಡಿದರು.
ಭಾರತೀಯ ಜೀವನ ಪದ್ಧತಿಯಲ್ಲಿ ಅಂಗವಸ್ತ್ರವನ್ನು ಧರಿಸುವ ಕ್ರಮ ಹಿಂದಿನಿಂದಲೂ ಇದೆ. ಗುರು ಹಿರಿಯರೊಂದಿಗೆ, ಮಕ್ಕಳೊಂದಿಗೆ, ರೋಗಿಗಳೊಂದಿಗೆ ಸಂಭಾಷಣೆ ನಡೆಸುವ ಸಂದರ್ಭ ಅಂಗವಸ್ತ್ರದಿಂದಲ್ಲೇ ಬಾಯನ್ನು ಮುಚ್ಚಿಕೊಳ್ಳುವ ಮೂಲಕ ಪರಂಪರೆ ಬೆಳೆದು ಬಂದಿದೆ. ಇದೇ ಪರಂಪರೆ ಇಂದಿನ ಕೊರೋನಾ ವಿಮೋಚನಾ ಜಾಗೃತಿ ಸಮರದಲ್ಲಿ ಮಾಸ್ಕ್ ಎನ್ನುವ ರೂಪದಲ್ಲಿ ಜಾರಿಗೆ ಬಂದಿದೆ.
ವ್ಯಕ್ತಿಯ ರಕ್ಷಣೆಯ ಜೊತೆಗೆ ರಾಷ್ಟ್ರದ ರಕ್ಷಣೆಯನ್ನು ಮಾಡುವ ಸಂಕಲ್ಪದೊಂದಿಗೆ ಕೈಗೊಂಡಿರುವ ಮಾಸ್ಕ್ ಧಾರಣೆಯ ಅಭಿಯಾನವನ್ನು ಸರಕಾರದ ಸೂಚನೆಯಂತೆ ನಾವೆಲ್ಲರೂ ಪಾಲಿಸೋಣ.
ಕನ್ನಡ ನಾಮಾಕಿಂತ ಮಾಸ್ಕ್ ಧರಿಸುವ ಮೂಲಕ ಭಾಷಾ ಪ್ರಜ್ಞೆ ಹಾಗೂ ನಮ್ಮ ರಾಷ್ಟ್ರೀಯ ಜೀವನ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಲೆಂದರು.
ಈ ಸಂದರ್ಭ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಮೊದಲಾದವರು ಉಪಸ್ಥಿತರಿದ್ದು ಕನ್ನಡ (ಕ) ನಾಮಾಂಕಿತ ಮಾಸ್ಕ್‌ಗಳನ್ನು ವಿತರಿಸಲಾಯಿತು.


Comments are closed.