ಕರಾವಳಿ

‘ನಮ್ಮ ನಡೆ ಕೃಷಿಯ ಕಡೆ’; ಕೃಷಿಯತ್ತ ಒಲವು ತೋರಿದ ಯುವ ಪಡೆ..!

Pinterest LinkedIn Tumblr

ಹರಿಪಾದ: ಇತ್ತೀಚೆಗೆ ಭಯಂಕರವಾಗಿ ದೇಶವನ್ನು ಕಾಡಿತ್ತಿರುವ ವೈರಸ್ ಕೊರೊನಾ ಎಲ್ಲೆಡೆ ಆತಂಕ ಸೃಷ್ಟಿಸಿರುವುದು ನಮಗೆಲ್ಲರಿಗೂ ಗೊತ್ತು. ದೇಶದಲ್ಲೆಡೆ ಕೊರೊನಾ ಮಾರಿಯನ್ನು‌ ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಲಾಕ್ ಡೌನ್ ಜಾರಿ ಮಾಡಲಾಯಿತು. ಈ ಸಂದರ್ಭದಲ್ಲಿ ಎಷ್ಟೋ ಜನರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ‌ಎದುರಿಸಿತ್ತಿದ್ದರು.

ಇದಕ್ಕೆ ತದ್ವಿರುದ್ಧವಂತೆ ಅಲ್ಲೊಂದು ಯುವ ಸಮೂಹ ಒಂದು ಉತ್ತಮ‌ ಯೋಚನೆಯನ್ನು ಅನಾವರಣಗೋಳಿಸಿದರು. ಅದೇ *ನಮ್ಮ ನಡೆ.. ಕೃಷಿಯ ಕಡೆ*.

ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್ (ರಿ) ಹರಿಪಾದ ಇದರ ಯುವಕರು ಲಾಕ್ ಡೌನ್ ವೇಳೆಯಲ್ಲಿ ಕೆಲಸ ಇಲ್ಲದೆ ಮನೆಯಲ್ಲಿರುವ ಬದಲು ಪಾಳುಬಿದ್ದ ಗದ್ದೆಯಲ್ಲಿ ಕೃಷಿ ಮಾಡುವ ಯೋಜನೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ರಾಮದಾಸ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಕಾರ್ಯಗತಗೋಳಿಸಿದರು.

ಈ ವಿನೂತನ ಕೆಲಸ ಸಮಾಜದ ಇನ್ನಷ್ಟು ಯುವಕರಿಗೆ ಮಾದರಿಯಾದಲ್ಲಿ ನಮ್ಮ ಶ್ರಮಕ್ಕೆ ಒಂದು ಅರ್ಥ ಬರುವುದೆಂದು ಸಂಘದ ಅಧ್ಯಕ್ಷರಾದ ಶ್ರೀ ಚೇತನ್ ಇವರ ಆಶಯ.

Comments are closed.