ಕರಾವಳಿ

ಕೋವಿಡ್-19: ಸಿಎಂ ಪರಿಹಾರ ನಿಧಿಗೆ 5 ಲಕ್ಷ ದೇಣಿಗೆ ನೀಡಿದ ಸಾಮಿಲ್ ಮಾಲಕರ ಸಂಘ (Video)

Pinterest LinkedIn Tumblr

ಕುಂದಾಪುರ: ಮಾನವ ಸೇವೆಯೇ ಮಾಧವ ಸೇವೆ,ಸಂಕಷ್ಟದಲ್ಲಿರುವ ಜನರಿಗೆ ಸಾಮಿಲ್ ಮಾಲೀಕರ ಸಂಘದವರು ಮಾಡಿದ ಸಹಾಯ ನಿಜಕ್ಕೂ ಪುಣ್ಯದ ಕಾರ್ಯ. ಕೊರೋನಾ ವಿರುದ್ಧದ ಹೋರಾಟದದಲ್ಲಿ ಅರಣ್ಯ ಇಲಾಖೆಯವರು ಕೂಡ ಮುಖ್ಯವಾಹಿನಿಯಲ್ಲಿ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಹೇಳಿದರು.

ಕುಂದಾಪುರ ಉಪ ಅರಣ್ಯ ಇಲಾಖಾ ಕಚೇರಿಯಲ್ಲಿ ಶುಕ್ರವಾರದಂದು ಸಾಮಿಲ್ ಮಾಲೀಕರ ಸಂಘದ ಹಿರಿಯರಾದ ಸುಧೀರ್ ಪಂಡಿತ್ ನೇತೃತ್ವದಲ್ಲಿ ಕುಂದಾಪುರ, ಉಡುಪಿ, ಬ್ರಹ್ಮಾವರ, ಕಾರ್ಕಳ,ಮೂಡುಬಿದಿರೆ ಸಂಘದಿಂದ ಕೊರೋನಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಲ್ಪಟ್ಟ 5 ಲಕ್ಷದ ಚೆಕ್ ಅನ್ನು ಸ್ವೀಕರಿಸಿ ಮಾತನಾಡಿದರು.

ಸಂಕಷ್ಟದ ಸಮಯದಲ್ಲಿ ನೀವು ಕೊಟ್ಟ 5 ಲಕ್ಷ ರೂಪಾಯಿ ನೇರವಾಗಿ ಜನರಿಗೆ ತಲುಪುತ್ತದೆ. ಇದೊಂದು ದೈವ ಕಾರ್ಯವಾಗಿದೆ. ಕೋವಿಡ್ 19 ಇಂದ ದೇಶ, ರಾಜ್ಯ, ಜಗ್ಗತ್ತು ತತ್ತರಿಸಿರುವ ಸಮಯದಲ್ಲಿ ನೀವು ಮಾಡಿದ ಸಹಾಯ ಶ್ಲಾಘನೀಯ. ಅಂತೆಯೇ ಪ್ರಕೃತಿ ರಕ್ಷತಿ ರಕ್ಷಿತ; ಎಂಬ ಮಾತಿನಂತೆ ನಾವು ಪ್ರಕೃತಿಯನ್ನು ರಕ್ಷಿಸಬೇಕು, ಗೌರವಿಸಬೇಕು. ಸಮಾಜದಲ್ಲಿ ಮಾನವರಿಗೆ ಜೀವಿಸಲು ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಜೀವರಾಶಿಗಳಿಗೂ ಇದೆ. ಕೋವಿಡ್ 19 ವೈರಸ್ ಹಬ್ಬಲು ಪ್ರಕೃತಿಯನ್ನು ಹಾಳುಗೆಡವಿರುವುದು ಒಂದು ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಕುಲಾಲ್, ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾಮಿಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕ ಉದಯಕುಮಾರ್ ಟಿ ಕಾರ್ಯಕ್ರಮ ನಿರ್ವಹಿಸಿ, ಕೃಷ್ಣ ಗುಲ್ವಾಡಿ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.