ಕರಾವಳಿ

ಉಡುಪಿ ಬೀಡಿನಗುಡ್ಡೆಯಲ್ಲಿ 45ಲಕ್ಷ ಮೌಲ್ಯದ ಚಿನ್ನದ ಗಟ್ಟಿ ದರೋಡೆ

Pinterest LinkedIn Tumblr

ಉಡುಪಿ: ಚಿನ್ನದ ವ್ಯಾಪಾರಿಯೋರ್ವರಿಂದ ಚಿನ್ನದ ಗಟ್ಟಿ ದೋಚಿದ ಘಟನೆ ಉಡುಪಿ ಬೀಡಿನಗುಡ್ಡೆ ಜಂಕ್ಷನ್‌ ಬಳಿ ಸಂಭವಿಸಿದೆ. ಬೀಡಿನಗುಡ್ಡೆಯ ವಿಜಯ್‌ ಜಾಧವ್‌ ಅವರು ಬೀಡಿನಗುಡ್ಡೆಯ ಸರ್ಕಲ್‌ ಬಳಿಯ ಲಕ್ಷ್ಮೀ ಟ್ರೇಡರ್ಸ್‌ ಸೆಂಟರ್‌ನ 2ನೇ ಮಹಡಿಯಲ್ಲಿನ ಅಂಗಡಿಯಲ್ಲಿ ಹಳೆಯ ಚಿನ್ನವನ್ನು ಕರಗಿಸಿ, ಚಿನ್ನದ ಗಟ್ಟಿಗಳನ್ನಾಗಿಸುವ ಕೆಲಸವನ್ನು ಮಾಡಿಕೊಂಡಿದ್ದರು.

ಮೇ 25ರಂದು ಚಿನ್ನದ ಕೆಲಸಗಾರರು ಮತ್ತು ಚಿನ್ನದ ವ್ಯಾಪಾರಿಗಳಿಂದ ಪಡೆದ ಹಳೆಯ ಚಿನ್ನವನ್ನು ಕರಗಿಸಿ, ಗಟ್ಟಿಗಳನ್ನಾಗಿ ಮಾಡಿಕೊಂಡಿದ್ದ 45 ಲಕ್ಷ ರೂ. ಮೌಲ್ಯದ ಅಂದಾಜು 1 ಕೆ.ಜಿ. 227 ಗ್ರಾಂ ತೂಕದ ಚಿನ್ನವ‌ನ್ನು ಒಂದು ವಯರ್‌ ಚೀಲದಲ್ಲಿ ಹಾಕಿಕೊಂಡು ಬೆಳಗ್ಗೆ ಅಂಗಡಿಯ ಶಟರ್‌ ಬೀಗವನ್ನು ತೆಗೆಯುವಾಗ ಮಾಸ್ಕ್ ಮತ್ತು ಹೆಲ್ಮೆಟ್‌ ಧರಿಸಿದ ಇಬ್ಬರು ಅಪರಿಚಿತರು ಇವರ ಬಳಿಯಿದ್ದ ಚಿನ್ನದ ಗಟ್ಟಿ ಇರುವ ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.