ಕರಾವಳಿ

ಮನೆಯಲ್ಲಿ ಕುಳಿತಿದ್ದ ಯುವಕನಿಗೆ ಸಿಡಿಲು ಬಡಿದು ದುರ್ಮರಣ: ಉಡುಪಿ ಕಟಪಾಡಿಯಲ್ಲಿ ಘಟನೆ

Pinterest LinkedIn Tumblr

ಉಡುಪಿ: ಮನೆ ಒಳಗೆ ಕುಳಿತಿದ್ದ ಯುವಕನೊಬ್ಬನಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಜೆ.ಎನ್ ನಗರದ ಪಡು ಏಣಗುಡ್ಡೆ ಎಂಬಲ್ಲಿ ನಡೆದಿದೆ. ಮೃತ ಪಟ್ಟ ವ್ಯಕ್ತಿ ಕಟಪಾಡಿಯ ಭರತ್ (22) ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಉಡುಪಿ ಜಿಲ್ಲೆಯಲ್ಲಿ ಜೋರಾಗಿ ಮಳೆ ಬಂದ ಕಾರಣ ಸಿಡಿಲು ಬಡಿದು ಭರತ್‌‌ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.

ಮೃತ ಯುವಕ ಭರತ್ ತಂದೆ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Comments are closed.