ಅಂತರಾಷ್ಟ್ರೀಯ

ಕೊರೋನಾ ಸೋಂಕು ನಿವಾರಣೆಗೆ ಸೋಂಕುನಿವಾರಕಗಳನ್ನು ಸಿಂಪಡಣೆ ಹಾನಿಕಾರಕ: WHO

Pinterest LinkedIn Tumblr


ಜಿನಿವಾ: ಕೊರೋನಾ ಸೋಂಕು ನಿವಾರಣೆಗೆ ರಸ್ತೆ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಕೊರೋನಾ ತಡೆಗಟ್ಟುವ ಬದಲು ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ರಸ್ತೆಗಳಲ್ಲಿ, ಮನೆಗಳ ಸುತ್ತಮುತ್ತ, ಕಂಪೌಡ್ ಗಳ ಹೊರಗೆ ಮತ್ತು ಒಳಗೆ ತೆರೆದ ಸ್ಥಳಗಳಲ್ಲಿ ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸುವುದರಿಂದ ಅದು ಸೋಂಕಿನ ನಿವಾರಣೆಗೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಬೀದಿಗಳು ಅಥವಾ ಮಾರುಕಟ್ಟೆ ಸ್ಥಳಗಳಂತಹ ಹೊರಾಂಗಣ ಸ್ಥಳಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುವುದು, ಧೂಮಪಾನ ಮಾಡುವುದು ಕೋವಿಡ್-19 ವೈರಸ್ ಅಥವಾ ಇತರ ರೋಗಕಾರಕಗಳನ್ನು ಕೊಲ್ಲಲು ಸಹಾಯವಾಗುವುದಿಲ್ಲ. ಸೋಂಕುನಿವಾರಕವನ್ನು ಕೊಳಕು ಮತ್ತು ಅವಶೇಷಗಳಿಂದ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ರಸ್ತೆಗಳು, ಪಾದಚಾರಿ ಸ್ಥಳಗಳು ಸೋಂಕು ಸಂಗ್ರಹಣೆಯ ಸ್ಥಳಗಳು ಎಂದು ಪರಿಗಣಿಸುವುದಿಲ್ಲ, ಹೀಗಿರುವಾಗ ಅಂತಹ ಕಡೆಗಳಲ್ಲಿ ಸೋಂಕು ನಿವಾರಕಗಳನ್ನು ಹೊರಗೆ ಸಿಂಪಡಿಸುವುದರಿಂದ ಗಾಳಿಯನ್ನು ಸೇವಿಸುವ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಸಂಸ್ಥೆ ಹೇಳಿದೆ.

ಇನ್ನು ವ್ಯಕ್ತಿಗಳ ಮೇಲೆ ಕೂಡ ಸೋಂಕು ನಿವಾರಕಗಳಿಂದ ಸಿಂಪಡಿಸುವುದನ್ನು ಯಾವುದೇ ಸಂದರ್ಭದಲ್ಲಿಯೂ ಶಿಫಾರಸು ಮಾಡುವುದಿಲ್ಲ ಎಂದು ದಾಖಲೆಗಳು ಹೇಳುತ್ತವೆ.ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕವಾಗಬಹುದು ಮತ್ತು ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡುವುದನ್ನು ಕೂಡ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Comments are closed.