ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಪರ್ಕಳ,ಮಣಿಪಾಲ,ಉಡುಪಿ ಮುಖ್ಯರಸ್ತೆಯ ಕಾಮಗಾರಿಯನ್ನು ಇಲಾಖಾ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.ಮಳೆಗಾಲ ಆರಂಭವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ತಕ್ಷಣದಲ್ಲಿ ಪೂರೈಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಸುಮಿತ್ರ ಆರ್ ನಾಯಕ್, ಮಂಜುನಾಥ್, ವಿಜಯಲಕ್ಷ್ಮಿ, ಕಲ್ಪನಾ ಸುಧಾಮ, ಅಶೋಕ್ ನಾಯ್ಕ, ಭಾರತಿ ಪ್ರಶಾಂತ್, ಗಿರೀಶ್ ಅಂಚನ್ ಮತ್ತು ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ಹಾಗೂ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.
Comments are closed.