ಕರಾವಳಿ

ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿಯ ಪನ್ವೆಲ್ ವತಿಯಿಂದ ತುಳು ಕನ್ನಡಿಗರಿಗೆ ದಿನಬಳಕೆಯ ಸಾಮಗ್ರಿ ವಿತರಣೆ

Pinterest LinkedIn Tumblr

ಮುಂಬೈ : ನವಿ ಮುಂಬೈ ಪನ್ವೆಲ್ ಪರಿಸರದಲ್ಲಿ ಪ್ರಸಿದ್ಧ ವಾಗಿರುವ ಶ್ರೀ ವೃಂದಾವನ ಬಾಬಾ ಆಶ್ರಮ ದಲ್ಲಿ ತುಳು-ಕನ್ನಡಿಗರು ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿಯನ್ನು ಪ್ರಾರಂಭಿಸಿ ಕೊಂಡು ವಿವಿಧ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರಚಾರವನ್ನು ಬಯಸದೆ ಪದಾಧಿಕಾರಿಗಳು ಇಲ್ಲದೆ ವಿವಿಧ ರೀತಿಯ ಸೇವಾಕಾರ್ಯಗಳನ್ನು ಮಾಡುತ್ತಾ .ಪನ್ವೆಲ್. ನ್ಯೂ ಪನ್ವೆಲ್ ಮತ್ತು.ಓಲ್ಡ್ ಪನ್ವೇಲ್. ಈ ಪರಿಸರದಲ್ಲಿ ಜನಪ್ರಿಯ ಭಜನೆ ಮಂಡಳಿಯಾಗಿ ಗುರುತಿಸಿಕೊಂಡಿದೆ.

ಪ್ರತಿ ಗುರುವಾರ ಸುಮಾರು ನೂರಕ್ಕೂ ಮಿಕ್ಕಿ ತುಳುವರು ಕನ್ನಡಿಗರು ಒಟ್ಟಾಗಿ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ಭಜನೆಗಳನ್ನು ನಡೆಸಿಕೊಂಡು ಬರುತ್ತಿದೆ ಅಲ್ಲದೆ ಪ್ರತಿವರ್ಷ  ಕಲಿಯುಗವರದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಯನ್ನು ನಡೆಸಿ ಸಾವಿರಾರು ಭಕ್ತರಿಗೆ ಅನ್ನದಾನ ನಡೆಸುತ್ತಾ ಬಂದಿದೆ.

ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ .ನಾಟಕ. ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ತುಳುವರ ಮತ್ತು ಕನ್ನಡಿಗರಿಗೆ ಮನರಂಜಿಸುವ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತದೆ.

ಇದೀಗ ಜಗತ್ತಿಗೆ ಅಪ್ಪಳಿಸಿ ಕೊಂಡಿರುವ Covid 19 ಮಹಾಮಾರಿಯಿಂದ ರಕ್ಷಿಸಲು ದೇಶದ ಪ್ರಧಾನಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ನಮ್ಮೆಲ್ಲರ ಹಿತಾದ್ರಿಷ್ಟಿಯಿಂದ lockdown ಘೋಷಿಸಿದ್ದಾರೆ.

ಅದರ ಪಾಲನೆ ಯನ್ನು ನಾವೆಲ್ಲರೂ ಮಾಡುತ್ತಿದ್ದೇವೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪನ್ವೆಲ್ ಪರಿಸರದ ಜನರಿಗೆ ತುಂಬಾ ಸಮಸ್ಯೆಯಾಗಿದೆ ಅಂಥವರಿಗೆ ಸಹಾಯ ಮಾಡುವ ಉದ್ದೇಶದಿಂದ  ಶ್ರೀ ವೃಂದಾವನ. ಬಾಬಾ ಭಜನಾ ಮಂಡಳಿ, ಪನ್ವೇಲ್, ಇದರ ಸದಸ್ಯರೆಲ್ಲರ ವತಿಯಿಂದ ಪನ್ವೇಲ್, ಕಾಮೋತೆ , ಕಲಂಬೊಲ್ಲಿ , ಖಾರ್ಘರ್ ಪರಿಸರದಲ್ಲಿ ಸಂಕಷ್ಟದಲ್ಲಿರುವ ತುಳು ಕನ್ನಡಿಗರಿಗೆ ದಿನಬಳಕೆ ವಸ್ತು ( ಅಕ್ಕಿ , ಹಿಟ್ಟು , ಎಣ್ಣೆ , ದಾಲ್ ಇತ್ಯಾದಿ ) ವಿತರಣೆ ನಡೆಯುತ್ತಿದೆ,

ಆದ್ದರಿಂದ ಈ ಪರಿಸರದಲ್ಲಿ ಯಾರಿಗಾದರೂ ಇದರ ಅವಶ್ಯಕತೆ ಇದ್ದಲ್ಲಿ ಮಂಡಳಿಯ ಸದಸ್ಯರ ಸಂಪರ್ಕಿಸಬಹುದು ಎಂದು ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿ ಪನ್ವೇಲ್. ಸೇವಾಕರ್ತರು ತಿಳಿಸಿರುವರು.

_ದಿನೇಶ್ ಕುಲಾಲ್ ಮುಂಬೈ

Comments are closed.