ಕರಾವಳಿ

ಚಿಲಿಂಬಿ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ ವತಿಯಿಂದ 3000ಕ್ಕೂ ಹೆಚ್ಚು ಅಹಾರ ಕಿಟ್ ವಿತರಣೆ – 800ಕ್ಕೂ ಹೆಚ್ಚು ಮಂದಿಗೆ ದಿನಾ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ

Pinterest LinkedIn Tumblr

ಮಂಗಳೂರು, ಎಪ್ರಿಲ್ .30: ಮಂಗಳೂರಿನ ಉರ್ವ ಚಿಲಿಂಬಿಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ದಲ್ಲಿ ತಾರೀಕು 01-04-2020 ನೇ ಬುಧವಾರ ದಿಂದ 03-04-2020 ನೇ ಶುಕ್ರವಾರದ ವರೆಗೆ ವಿಜೃಂಭಣೆಯಿಂದ ನಡೆಯಬೇಕಾಗಿದ್ದ 55ನೇ ವರ್ಷದ ಶ್ರೀ ರಾಮನವಮಿ ಉತ್ಸವವು ಹಾಗೂ ಸಾಯಿಬಾಬಾರಿಗೆ ನಡೆಯ ಬೇಕಾಗಿದ್ದ ವಿಶೇಷ ಸೇವೆಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಕೋರೋನ ವೈರಸ್ ನ ಕಾರಣದಿಂದ ರದ್ದಾಗಿದೆ ಎಂದು ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ವಿಶ್ವಾಸ್ ದಾಸ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಕೋರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರ ವಿಧಿಸಿರುವ ಲಾಕ್‌ಡೌನ್ ಕಾರಣದಿಂದ ನಿತ್ಯ ದುಡಿದು ಜೀವನ ನಡೆಸುತ್ತಿರುವ ಬಡ ಸಂಸಾರಗಳು ಇಂದು ದುಡಿಯಲು ಕೆಲಸವಿಲ್ಲದೆ ತಿನ್ನುವ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ,ಇಂಥಹ ಸಂಸಾರಗಳಿಗೆ ನಮ್ಮ ಮಂದಿರದಿಂದ ಸಾಧ್ಯವಾದಷ್ಟು ಸಹಾಯ ಸಹಕಾರವನ್ನು ನೀಡಲು ನಿರ್ಧರಿಸಿ, ಶ್ರೀ ರಾಮನವಮಿ ಉತ್ಸವದ ದಿನವಾದ ಗುರುವಾರದಂದು 500ಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ತಲಾ 5 ಕೆ.ಜಿ ಅಕ್ಕಿ, ಬೆಲ್ಲ ಹಾಗು ತೆಂಗಿನಕಾಯಿಗಳನ್ನು ಪ್ರತೀ ಮನೆ ಮನೆಗೆ ತೆರಳಿ ನೀಡಿ ಈ ಬಾರಿಯ ಶ್ರೀ ರಾಮನವಮಿ ಉತ್ಸವವನ್ನು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ವಿಶ್ವಾಸ್ ದಾಸ್ ಕುಮಾರ್ ಅವರು ಹೇಳಿದ್ದಾರೆ.

800ಕ್ಕೂ ಹೆಚ್ಚು ಮಂದಿಗೆ ದಿನಾ ಮಧ್ಯಾಹ್ನ, ರಾತ್ರಿ ಊಟ :

ಮಾತ್ರವಲ್ಲದೇ ಈ ಲಾಕ್‌ಡೌನ್ ಸಂಧರ್ಭದಲ್ಲಿ ಕೆಲಸವಿಲ್ಲದೇ ಹಸಿವೆಯಿಂದ ಇರುವ ಸುಮಾರು 3000ಕ್ಕೂ ಹೆಚ್ಚಿನ ಕುಟುಂಬಗಳಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಬೆಲ್ಲದ ದಿನಬಳಕೆಯ ಆಹಾರ ಸಾಮಗ್ರಿಯ ಕಿಟ್ಟನ್ನು ಹಾಗೂ ಲಾಕ್‌ಡೌನ್ ಪ್ರಾರಂಭದ ದಿನದಿಂದ ಪ್ರತಿನಿತ್ಯವೂ ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಸುಮಾರು 800ಕ್ಕೂ ಹೆಚ್ಚು ಮಂದಿಗೆ ಮಧ್ಯಾಹ್ನ, ರಾತ್ರಿಯ ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ ವತಿಯಿಂದ ಮಾಡಲಾಗುತ್ತಿದೆ ಎಂದು ವಿಶ್ವಾಸ್ ದಾಸ್ ಕುಮಾರ್ ತಿಳಿಸಿದ್ದಾರೆ.

Comments are closed.