ಕರಾವಳಿ

ತಲ್ಲೂರಿನ 76 ಕುಟುಂಬಕ್ಕೆ ನಿತ್ಯಬಳಕೆ ವಸ್ತುಗಳ ಕಿಟ್ ವಿತರಿಸಿದ ಗ್ರಾ.ಪಂ ಸದಸ್ಯ ಉದಯ್ ಕುಮಾರ್ ತಲ್ಲೂರು

Pinterest LinkedIn Tumblr

ಕುಂದಾಪುರ: ಕೊರೇೂನಾ ಪಿಡುಗಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಗೆ ಒಳಗಾಗಿ ಜನ ಅತಂತ್ರರಾಗಿ ಕಂಗಾಲಾಗಿರುವ ಸಂದರ್ಭ ಆಯಾಯ ಗ್ರಾಮಗಳಲ್ಲಿ‌ ಉದಾರ ದಾನಿಗಳಿಂದ ನಿತ್ಯ ಬಳಕೆಗೆ ಬೇಕಿರುವ ಆಹಾರ ಸಾಮಾಗ್ರಿಗಳ ಕಿಟ್ ಹಂಚಿ ಮಾನವಿಯ ಮೌಲ್ಯವನ್ನು ಎತ್ತಿಹಿಡಿದು ಕಡುಬಡವರುಗಳ ಹಸಿವು ನೀಗಿಸುವ ಕೆಲಸವಾಗುತ್ತಿದೆ.

ಈ ನಿಟ್ಟಿನಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯ, ನೀರುನೈರ್ಮಲ್ಯ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರ ಮುಖಾಂತರ ದಾನಿಗಳಾದ ಶೀರೂರಿನ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ ಯಾಸಿನ್ ಶಿರೂರು ಇವರಿಂದ ತಮ್ಮ ಗ್ರಾಮ ಪಂಚಾಯತ್ ವಾರ್ಡಗೆ ಒಂದನೆ ಹಂತದಲ್ಲಿ 76 ಮನೆಗಳಿಗೆ ಅಕ್ಕಿ ದಿನಸಿ ಸಾಮಾಗ್ರಿಗಳಿರುವ ಕಿಟ್ ಹಂಚಿ ಸ್ಫೂರ್ತಿಯಾದರು . ಅಲ್ಲದೇ ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೂ ಕಿಟ್ ಹಂಚಿ ನಿಮ್ಮೂಂದಿಗೆ ನಮ್ಮ ಬಲ ಇದೆ ಎಂದು ಹುರಿದುಂಬಿಸಿದರು. ಕಿಟ್ ಹಂಚಲು ಆ ಭಾಗದ ಜೈ ಭೀಮ್ ಹುಡುಗರು ಸೇನಾನಿಗಳಂತೆ ಸಹಕರಿಸಿ ಉದಯ್ ಕುಮಾರ್ ತಲ್ಲೂರು ಹಾಗೂ ದಾನಿಗಳಿಗೆ ಸಾತ್ ನೀಡಿದರು.

ಇನ್ನುಳಿದ ಮನೆಗಳಿಗೆ ಎರಡನೆ ಹಂತದಲ್ಲಿ ದಾನಿಗಳ ನೆರವಿನಲ್ಲಿ ನಿತ್ಯ ಬಳಕೆ ವಸ್ತುಗಳ ಕಿಟ್ ಹಂಚಲು ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Comments are closed.